
ಕೋಲಾರ, ಡಿಸೆಂಬರ್ ೨೨ (ಹಿ.ಸ) :
ಆ್ಯಂಕರ್ : ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಶೌಚ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ಸಂಬ0ಧ ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಸದಸ್ಯೆ ಡಾ.ಅಂಜು ಬಾಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ಶಾಲೆಯಲ್ಲಿನ ಶೌಚ ಗುಂಡಿ ಪರಿಶೀಲಿಸಿದ ಅವರು ‘ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು’ ಎಂದರು, ತಕ್ಷಣವೇ ಕೊಲೆ ಯತ್ನ ಕೇಸು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.
ಶೌಚದ ಗುಂಡಿಗೆ ಇಳಿಸಿದವರಿಗೆ ಸ್ವಲ್ಪವೂ ಮಾನವೀಯತೆ ಇಲ್ಲವೇ? ಇಂಥ ಗುಂಡಿಗೆ ಇಳಿದಾಗ ಗುಂಡಿಯೊಳಗಿನ ಗ್ಯಾಸ್ ನಿಂದಾಗಿ ಮಕ್ಕಳು ಉಸಿರುಗಟ್ಟಿ ಸಾಯುವ ಸಾಧ್ಯತೆಗಳು ಹೆಚ್ಚು ಇರುತ್ತವೆ’ ಎಂದರು.
ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದು ತರಾಟೆಗೆ ತೆಗೆದುಕೊಂಡರು. ನಂತರ ಮಕ್ಕಳನ್ನು ಕರೆದು ಸಮಸ್ಯೆ ಆಲಿಸಿ ಸಾಂತ್ವನ ಹೇಳಿದರು. ಘಟನೆಯಲ್ಲಿ ಭಾಧಿತರಾದ ೧೫ ವಿದ್ಯಾರ್ಥಿಗಳಿಗೆ ಪರಿಹಾರ ದೊರೆತ ಬಗ್ಗೆ ಖಾತರಿ ಪಡಿಸಿಕೊಂಡ ಆಯೋಗದ ಸದಸ್ಯರು, ನಿರ್ದೇಶಕರು ವಸತಿ ಶಾಲೆಯ ಮಕ್ಕಳ ಜೊತೆಗೆ ಊಟ ಮಾಡಿ ಗುಣಮಟ್ಟವನ್ನು ಪರಿಶೀಲಿಸಿದರು.
ಭೇಟಿ ಸಂದರ್ಭದಲ್ಲಿ ರಾಷ್ಟೀಯ ಅನುಸೂಚಿತ ಜಾತಿಗಳ ಆಯೋಗದ ನಿರ್ದೇಶಕ ಸುನಿಲ್ ಬಾಬು, ಸದಸ್ಯರ ಆಪ್ತ ಕಾರ್ಯದರ್ಶಿ ಬಿ.ಕೆ.ಭೋಲಾ, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ;
೧. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಳುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಸದಸ್ಯೆ ಡಾ.ಅಂಜು ಬಾಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
೨. ಜಿಲ್ಲಾಧಿಕಾರಿ ಅಕ್ರಂ ಪಾಷ ಈ ಸಂದರ್ಭದಲ್ಲಿ ಡಾ. ಅಂಜು ಬಾಲ ರವರನ್ನು ಸ್ವಾಗತಿಸಿದರು.
