ದೆಹಲಿ, 23 ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತದ ಸಾಲ ಪ್ರಮಾಣದ ಬಗ್ಗೆ ಐಎಂಎಫ್ ಕಳವಳ ವ್ಯಕ್ತಪಡಿಸಿದೆ. ಸರ್ಕಾರದ ಸಾಲ ಪ್ರಮಾಣ ಮುಂದಿನ ದಿನಗಳಲ್ಲಿ ಜಿಡಿಪಿ ಮೊತ್ತದ ಮಟ್ಟವನ್ನು ಮೀರಿ ಹೋಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ. ಹಾಗೆಯೇ, ಹವಾಮಾನ ಬದಲಾವಣೆ ಸಮಸ್ಯೆ ಎದುರಿಸಲು ಸರ್ಕಾರ ಮಾಡಿರುವ ಹೂಡಿಕೆ ಸಾಕಷ್ಟಿಲ್ಲ ಎಂದೂ ಅದು ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಐಎಂಎಫ್ನ ಈ ವಾದಗಳನ್ನು ಭಾರತ ಒಪ್ಪಿಲ್ಲ. ಭಾರತಕ್ಕೆ ಸಾಲದ ಸಮಸ್ಯೆ ತಲೆದೋರುವುದಿಲ್ಲ ಎಂದು ಸರ್ಕಾರ ವಿವರಣೆ ನೀಡಿದೆ.
‘ಸರ್ಕಾರದ ಸಾಲಗಳು ಹೆಚ್ಚಾಗಿ ರೂಪಾಯಿ ಕರೆನ್ಸಿಯಲ್ಲಿ ಇವೆ. ಹೀಗಾಗಿ, ಇಂಥ ಸಾಲದಿಂದ ಆಗುವ ಅಪಾಯ ಬಹಳ ಸೀಮಿತ ಮಟ್ಟದ್ದು. ಕಳೆದ ಎರಡು ದಶಕದಲ್ಲಿ ಜಾಗತಿಕ ಆರ್ಥಿಕತೆಗೆ ಹಲವು ಆಘಾತವಾದರೂ ಭಾರತದ ಸಾರ್ವಜನಿಕ ಸಾಲ ಹೆಚ್ಚು ಏರಿಕೆ ಆಗಿಲ್ಲ. 2005-06ರಲ್ಲಿ ಜಿಡಿಪಿ ಮತ್ತು ಪಬ್ಲಿಕ್ ಡೆಟ್ ಅನುಪಾತ ಶೇ. 81ರಷ್ಟಿತ್ತು. 2021-22ರಲ್ಲಿ ಇದು ಶೇ. 81ಕ್ಕೆ ಏರಿತು. ಈಗ 2022-23ರಲ್ಲಿ ಈ ಪ್ರಮಾಣವು ಶೇ. 81ಕ್ಕೆ ಮತ್ತೆ ಇಳಿದಿದೆ,’ ಎಂದು ಐಎಂಎಫ್ನಲ್ಲಿ ಭಾರತದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಕೆ.ವಿ. ಸುಬ್ರಮಣಿಯನ್ ಅಂಕಿ ಅಂಶ ಸಮೇತ ವಿವರಣೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
