ಬೆಂಗಳೂರು, 26 ಡಿಸೆಂಬರ್(ಹಿ.ಸ):
ಆ್ಯಂಕರ್ :
ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷಿ ಅನ್ನೋ ಮಾತು ಮತ್ತೆ ಮರುಕಳಿಸ್ತಿದ್ಯಾ? ಗೊತ್ತಿಲ್ಲ.. ಆದ್ರೆ, ರಾಜ್ಯದಲ್ಲಿ ಹಬ್ಬುತ್ತಿರುವ ಕೊರೊನಾ ಸೋಂಕಿನ ಸುಂಟರಗಾಳಿ ಇದನ್ನ ರುಜುಪಡಿಸ್ತಿದೆ. ಕೋವಿಡ್ ಸಂಪೂರ್ಣವಾಗಿ ಮರೆಯೋ ಸಮಯದಲ್ಲೇ ಕೋವಿಡ್ ಆತಂಕ ಮತ್ತೆ ಶುರುವಾಗಿದೆ. ಈ ಮಧ್ಯೆ ಇವತ್ತು ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಕರೆಯಲಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೆ ದಿನೇ ಹೆಚ್ಚಾಗ್ತಿವೆ. ಜೆಎನ್.1 ಆತಂಕ ಇರುವಾಗಲೇ ರಾಜ್ಯದಲ್ಲಿ ಆರೋಗ್ಯ ಇಲಾಖೆಗೆ ಭೀತಿ ಶುರುವಾಗಿದೆ. ಇಷ್ಟು ದಿನ ಕೇಸ್ ಪತ್ತೆ ಆಗದ ಹಿನ್ನೆಲೆ ನೆಮ್ಮದಿ ಆಗಿದ್ದ ಜನರಿಗೆ ಮಾರಿ ಶಾಕ್ ಕೊಟ್ಟಿದೆ. ಈ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಗೆ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
