


ರಾಯಚೂರು,, 22 ಡಿಸೆಂಬರ್(ಹಿ.ಸ):
ಆ್ಯಂಕರ್ : ಮಹಿಳೆಯರು ಸದೃಢವುಳ್ಳ ಜೀವನ ರೂಪಿಸಕೊಳ್ಳಬೇಕಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಾಂಡ್ವೆ ರಾಹುಲ್ ತುಕಾರಾಮ ಅವರು ಕರೆ ನೀಡಿದ್ದಾರೆ.
ಅವರು ಡಿ.೨೨ರ(ಶುಕ್ರವಾರ) ನಗರದ ಐಎಂಎ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರಿಗಾಗಿ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯು ಬಡ ಜನರ ಆರೋಗ್ಯ ಮಟ್ಟ ಸುಧಾರಿಸಲು ಹಲವು ಜನ ಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಇಂದಿನಿAದ ಜಿಲ್ಲೆಯಾದ್ಯಂತ ನಡೆಯಲಿರುವ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಮಹಿಳೆಯರ ಆರೋಗ್ಯದಲ್ಲಿ ಏನಾದರು ಸಮಸ್ಯೆ ಕಂಡುಬAದಲ್ಲಿ ತಕ್ಷಣವೇ ನುರಿತ ವೈದ್ಯರ ಸಂಪರ್ಕಿಸಿ, ಅವರ ಸಲಹೆ ಸೂಚನೆಗಳನ್ನು ಪಾಲನೆ ಮಾಡುವದರ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಶಿಬಿರದಲ್ಲಿ ಸ್ತಿçà ರೋಗ ತಜ್ಞರ ತಂಡದಿAದ ೧೩೩ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು, ಫಿಜೀಸಿಯನ್ ತಜ್ಞರ ತಂಡದಿAದ ೯೪ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು, ನೇತ್ರ ತಜ್ಞರ ತಂಡದಿAದ ೯೩ ಮಹಿಳೆಯರಿಗೆ ತಪಾಸಣೆ ಮಾಡಿ ೪೮ ಕನ್ನಡಕಗಳನ್ನು ವಿತರಣೆ ಮಾಡಲಾಯಿತು, ದಂತ ವೈದ್ಯರ ತಂಡದಿAದ ೨೨ ಮಹಿಳೆಯರಿಗೆ ಹಲ್ಲಿನ ಪರಿಕ್ಷೆ ಮಾಡಲಾಯಿತು, ಮಾನಸಿಕ ಆರೋಗ್ಯ ತಜ್ಞರ ತಂಡದಿAದ ೫ ಜನ ಮಹಿಳೆಯರಿಗೆ ತಪಾಸಣೆ ಮಾಡಲಾಯಿತು, ಎನ್.ಸಿ.ಡಿ ಕ್ಲೀನಿಕ್ ತಂಡದಿAದ ೨೩೬ ಜನರಿಗೆ ಬಿಪಿ, ಸುಗರ್, ತಪಾಸಣೆ ಮಾಡಲಾಯಿತು, ಂಃPಒಎಙ-ಅಒ ಅಚಿಡಿಜ ಗಳನ್ನು ೬೫ ಫಲಾನುಭಾವಿಗಳಿಗೆ ಸೃಜನೆ ಮಾಡಿ ವಿತರಣೆ ಮಾಡಲಾಯಿತು.
ಶಿಬಿರದ ದಿನಾಂಕ: ಡಿಸೆಂಬರ್ ೨೭ರಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ, ಡಿ.೩೦ರಂದು ಸಿಂಧನೂರು ತಾಲೂಕಿನ ಆಯುಷ್ ಆಸ್ಪತ್ರೆಯಲ್ಲಿ, ಜನವರಿ ೩ರಂದು ಲಿಂಗಸೂಗೂರು ತಾಲೂಕಿನ ಗುರುಭವನ, ಜನವರಿ ೦೬ರಂದು ಮಾನ್ವಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಜನವರಿ ೧೦ರಂದು ಸಿರವಾರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
ಈ ಸಂದರ್ಭದಲ್ಲಿ ಐ.ಎ.ಎಸ್ ಪ್ರೋಬೇಷನರಿ ಅಧಿಕಾರಿಗಳಾದ ಸಾಹಿತ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಡಾ.ಗಣೇಶ, ಡಾ.ಶಾಕೀರ್, ಡಾ.ಚಂದ್ರಶೇಖರಯ್ಯ, ಡಾ.ಶಿವಕುಮಾರ, ಡಾ.ನಂದೀತಾ, ಡಾ.ಯಶೋಧ, ಡಾ.ಜಯಂತಿ, ಡಾ.ವೆಂಕಟೇಶ ನಾಯಕ ಹಾಗೂ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ತಜ್ಞ ವೈದ್ಯರುಗಳು ಮತ್ತು ಆರೋಗ್ಯ ಸಿಬ್ಬಂದಿಗಳು ಹಾಗೂ ಓಉಔ ರವರು ಹಾಜರಿದ್ದರು.
