ನವದೆಹಲಿ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
ಚಿನ್ನದ ಬೆಲೆ 500 ರಿಂದ 600 ರೂ.ವರೆಗೆ ಪ್ರತೀ 10 ಗ್ರಾಂಗೆ ಹೆಚ್ಚಳ ಕಂಡಿದ್ದು, ಬೆಳ್ಳಿಯ ದರ ಕೂಡ 900 ರೂ. ಪ್ರತಿ ಕಿಲೋಗ್ರಾಂಗೆ ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನ 1,00,750ರಿಂದ 1,00,900 ರೂ. ಪ್ರತೀ 10 ಗ್ರಾಂ ಹಾಗೂ 22 ಕ್ಯಾರೆಟ್ ಚಿನ್ನ 92,300ರಿಂದ 92,450 ರೂ. ಪ್ರತೀ 10 ಗ್ರಾಂ ದರದಲ್ಲಿ ಮಾರಾಟವಾಗುತ್ತಿದೆ.
ಬೆಳ್ಳಿಯ ದರ ದೆಹಲಿ ಮಾರುಕಟ್ಟೆಯಲ್ಲಿ ಇಂದು 1,16,000 ರೂ. ಪ್ರತಿ ಕಿಲೋಗ್ರಾಂ ತಲುಪಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
