ಮಿಯಾಮಿ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ಲೂಯಿಸ್ ಸುವಾರೆಜ್ ಅವರ ಎರಡು ಪೆನಾಲ್ಟಿ ಗೋಲುಗಳ ನೆರವಿನಿಂದ ಇಂಟರ್ ಮಿಯಾಮಿ ಟೈಗರ್ಸ್ ಯುಎಎನ್ಎಲ್ ವಿರುದ್ಧ 2-1 ಅಂತರದ ಜಯ ದಾಖಲಿಸಿ ಲೀಗ್ಸ್ ಕಪ್ ಸೆಮಿಫೈನಲ್ ಪ್ರವೇಶಿಸಿದೆ.
20ನೇ ಹಾಗೂ 87ನೇ ನಿಮಿಷಗಳಲ್ಲಿ ಸುವಾರೆಜ್ ಪೆನಾಲ್ಟಿ ಮೂಲಕ ಗೋಲು ಗಳಿಸಿದರು. ಮಧ್ಯಂತರದಲ್ಲಿ ಕೋಚ್ ಜೇವಿಯರ್ ಮಸ್ಚೆರಾನೊ ಕೆಂಪು ಕಾರ್ಡ್ ಪಡೆದು ಮೈದಾನದಿಂದ ಹೊರಬಂದರು. 67ನೇ ನಿಮಿಷದಲ್ಲಿ ಏಂಜಲ್ ಕೊರಿಯಾ ಟೈಗರ್ಸ್ ಪರ ಸಮಬಲ ತಂದುಕೊಟ್ಟರೂ, ಅಂತಿಮ ಕ್ಷಣದಲ್ಲಿ ಸುವಾರೆಜ್ ಜಯದ ಗೋಲು ಗಳಿಸಿದರು.
ಮೆಸ್ಸಿ ಗಾಯದ ಕಾರಣ ಪಂದ್ಯದಲ್ಲಿ ಆಡಲಿಲ್ಲ. 2023ರಲ್ಲಿ ಪ್ರಶಸ್ತಿ ಗೆದ್ದ ಇಂಟರ್ ಮಿಯಾಮಿ, ಮತ್ತೊಮ್ಮೆ ಕಪ್ ಗುರಿಯತ್ತ ಹೆಜ್ಜೆ ಇಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
