ನವದೆಹಲಿ, 3 ಫೆಬ್ರವರಿ (ಹಿ.ಸ):
ಆ್ಯಂಕರ್ :೨೦೨೩-೨೪ರ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ೬೦೦ ಲಕ್ಷ ಮೆಟ್ರಿಕ್ ಟನ್ಗಳಷ್ಟು ಭತ್ತ ಖರೀದಿ ಮಾಡಲಾಗಿದ್ದು, ಸಂಗ್ರಹಣೆ ಪೂರ್ಣಗೊಂಡಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಭತ್ತ ಖರೀದಿ ಪ್ರಕ್ರಿಯೆ ಆರಂಭವಾಗಿತ್ತು.
ಇದರಿಂದ ೭೫ ಲಕ್ಷ ರೈತರು ಕನಿಷ್ಠ ಬೆಂಬಲ ಬೆಲೆಯಡಿ ಪ್ರಯೋಜನ ಪಡೆದಿದ್ದಾರೆ. ಪ್ರಸ್ತುತ ೬೦೦ ಲಕ್ಷ ಮೆಟ್ರಿಕ್ ಟನ್ಗಳಷ್ಟು ಭತ್ತದ ಸಂಗ್ರಹಣೆಯೊಂದಿಗೆ, ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸುಮಾರು ೪೦೦ ಲಕ್ಷ ಮೆಟ್ರಿಕ್ ಟನ್ಗಳಷ್ಟು ವಾರ್ಷಿಕ ಅಗತ್ಯವಿದ್ದು, ಕೇಂದ್ರೀಯ ಸಂಗ್ರಹಣೆಯಲ್ಲಿ ೫೨೫ ಲಕ್ಷ ಮಟ್ರಿಕ್ ಟನ್ ಗಿಂತ ಹೆಚ್ಚಿನ ಅಕ್ಕಿಯನ್ನು ಹೊಂದಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.
