
ದೆಹಲಿ, 22 ಡಿಸೆಂಬರ್(ಹಿ.ಸ):
ಆ್ಯಂಕರ್ :
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಅವರು ದೆಹಲಯಲ್ಲಿಂದು ಜಲಾನಯನ ಯೋಜನೆಗಳಲ್ಲಿ ಹಸಿರು ಆರ್ಥಿಕತೆಗೆ ಪಾಪಸ್ಕಳ್ಳಿ” ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭೂ ಸಂಪನ್ಮೂಲಗಳ ಇಲಾಖೆ ಈ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ. ಇದರಲ್ಲಿ ನಾನಾ ವಲಯಗಳ ತಜ್ಞರು, ಉದ್ಯಮಿಗಳು ಮತ್ತು ಸಂಶೋಧಕರು ಸೇರಲಿದ್ದು, ಪಾಪಸ್ಕಳ್ಳಿಯನ್ನು ಬೆಳೆಯುವುದು ಮತ್ತು ಅದರ ಆರ್ಥಿಕ ಬಳಕೆ ಕುರಿತು ಚರ್ಚೆ ನಡೆಸಲಿದ್ದಾರೆ.
ಬರಪೀಡಿತ ಪ್ರದೇಶಗಳಲ್ಲಿ ಪಾಪಸ್ಕಳ್ಳಿ ಬೆಳೆಯುವುದನ್ನು ಉತ್ರೇಜಿಸಲು ನೀಲನಕ್ಷೆ ಸಿದ್ಧಪಡಿಸಲಾಗುವುದು.
ಹಿಂದೂಸ್ತಾನ್ ಸಮಾಚಾರ್
