ಜಮ್ಮು, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ವೈಷ್ಣೋದೇವಿ ದರ್ಶನಕ್ಕಾಗಿ ತೆರಳುತ್ತಿದ್ದ ಭಕ್ತರ ಬಸ್ ಸಾಂಬಾ ಜಿಲ್ಲೆಯ ಜಟ್ವಾಲ್‌ನಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಕನಿಷ್ಠ 40 ಮಂದಿಗೆ ಗಾಯಗಳಾಗಿವೆ.
ಉತ್ತರ ಪ್ರದೇಶದಿಂದ ಕತ್ರಾಗೆ ಹೊರಟಿದ್ದ ಬಸ್ ಸುಮಾರು 70 ಯಾತ್ರಿಕರನ್ನು ಹೊತ್ತೊಯ್ಯುತ್ತಿತ್ತು. ಮುಂಜಾನೆ 3.20ರ ಹೊತ್ತಿಗೆ ಜಟ್ವಾಲ್ ಗ್ರಾಮದ ಹೈಸ್ಕೂಲ್ ಬಳಿ ಬಸ್‌ನ ಟೈರ್ ಸ್ಫೋಟಗೊಂಡಿದ್ದು, ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಯಿಂದ ಬಸ್‌ನೊಳಗೆ ಭಕ್ತರು ಸಿಲುಕಿಕೊಂಡು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತುರ್ತು ಸೇವಾ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
