
ನವದೆಹಲಿ, 1 ಡಿಸೆಂಬರ್(ಹಿ.ಸ):
ಆ್ಯಂಕರ್ :
ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 7.6ರಷ್ಟು ಬೆಳೆದಿದೆ. ಸರ್ಕಾರ ಇಂದು ಗುರುವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಲ್ಲಿ ಇದು ಬಹಿರಂಗವಾಗಿದೆ. ಕಳೆದ ವರ್ಷದ ಎರಡನೇ ಕ್ವಾರ್ಟರ್ನಲ್ಲಿ (Q2 24FY ಜಿಡಿಪಿ ಶೇ. 6.2ರಷ್ಟು ಬೆಳೆದಿತ್ತು. ಈ ವರ್ಷ ಇಷ್ಟು ಮಟ್ಟಕ್ಕೆ ಜಿಡಿಪಿ ಬೆಳೆಯುತ್ತದೆ ಎಂದು ಯಾವ ಆರ್ಥಿಕ ತಜ್ಞರೂ ನಿರೀಕ್ಷಿಸಿರಲಿಲ್ಲ. ಆರ್ಬಿಐ ಮತ್ತು ಸರ್ಕಾರ ಕೂಡ ಇದನ್ನು ನಿರೀಕ್ಷಿಸಿರಲಿಲ್ಲ.
ಕೆಲ ದಿನಗಳ ಹಿಂದೆ ರಾಯ್ಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ವಿವಿಧ ಆರ್ಥಿಕ ತಜ್ಞರು ಎರಡನೇ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಬೆಳೆಯಬಹುದು ಎಂದು ಮಾಡಿದ್ದ ಅಂದಾಜು ಶೇ. 6.5ರಿಂದ ಶೇ. 7.1ರವರೆಗೆ ಇತ್ತು. ಆದರೆ ಎಲ್ಲರ ಲೆಕ್ಕಾಚಾರ ಮೀರಿಸುವಂತೆ ಎರಡನೇ ಕ್ವಾರ್ಟರ್ನಲ್ಲಿ ಆರ್ಥಿಕತೆ ಬೆಳೆದಿದೆ. ಸತತ ಎರಡು ಕ್ವಾರ್ಟರ್ ಅವಧಿಯಲ್ಲಿ ಜಿಡಿಪಿ ಶೇ. 7ಕ್ಕಿಂತಲೂ ಮೇಲಿದ್ದಂತಾಗಿದೆ. ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದಿತ್ತು.
ಹಿಂದೂಸ್ತಾನ್ ಸಮಾಚಾರ್
