ವಿಶಾಖಪಟ್ಟಣಂ, 19 ಫೆಬ್ರವರಿ : ಆ್ಯಂಕರ್:
ಸಮುದ್ರ ವಾಣಿಜ್ಯ ಸುರಕ್ಷತೆಗೆ ಸಂಬಂಧಿಸಿದ ನೌಕಾಪಡೆಗಳ ಮಿಲನ್ ಕಸರತ್ತು ಪ್ರದರ್ಶನ ವಿಶಾಖಪಟ್ಟಣಂ ದಲ್ಲಿ ಇಂದು ಆರಂಭವಾಗಲಿದೆ. ಭದ್ರ ಸಾಗರ ಭವಿಷ್ಯಕ್ಕಾಗಿ ನೌಕಾಮೈತ್ರಿ ಎನ್ನುವುದು ಮಿಲನ್ ೧೨ನೇ ಸಂಚಿಕೆಯ ವಿಷಯವಾಗಿದ್ದು, ೫೦ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಭಾರತೀಯ ನೌಕಾಪಡೆಯ ೨೦ ಹಡಗುಗಳು ಒಂದು ಸಾಗರ ಗಸ್ತು ವಿಮಾನ ಹಾಗೂ ವಿದೇಶಗಳ ೧೫ ಹಡಗುಗಳು ಸಮುದ್ರ ಕಸರತ್ತುಗಳಲ್ಲಿ ಪಾಲ್ಗೊಳ್ಳಲಿವೆ. ಮಿಗ್-೨೯ಕೆ ಸೇರಿದಂತೆ ೫೦ ವಿಮಾನಗಳು ಪಿ೮ಐ, ವಿಕ್ರಾಂತ್ ಮತ್ತು ವಿಕ್ರಮಾದಿತ್ಯ ವಿಮಾನ ವಾಹಕಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಮಿಲನ್ ಕಾರ್ಯಕ್ರಮ ೨೩ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಾಗರ ಚಟುವಟಿಕೆ ಕುರಿತ ವಿಚಾರ ಸಂಕಿರಣ, ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.
