
ದುಬೈ, 1 ಡಿಸೆಂಬರ್(ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದುಬೈನಲ್ಲಿ ಕಾಪ-೨೮ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮ ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ವೇದಿಕೆ ಒದಗಿಸುವುದು ಮಾತ್ರವಲ್ಲದೇ, ಕಾಪ್ ೨೮ ರ ನೇಪಥ್ಯದಲ್ಲಿ ಹವಾಮಾನ ಆರ್ಥಿಕತೆ, ಗ್ರೀನ್ ಕ್ರೆಡಿಟ್ ಉಪಕ್ರಮ, ಮತ್ತು ಲೀಡ್ ಐಟಿ ಕುರಿತ ಚರ್ಚೆಗಳಲ್ಲಿ ಪ್ರಧಾನಿಯವರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.
ಹವಾಮಾನ ಬದಲಾವಣೆ ಸಮಸ್ಯೆಯನ್ನು ನಿಗ್ರಹಿಸಲು ಬದ್ಧರಾಗಿರುವ ಜಾಗತಿಕ ನಾಯಕರಿಗೆ ಕಾಪ್-೨೮, ನಿರ್ಣಾಯಕವಾಗಿದ್ದು, ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನೆಗೆ ಅವಕಾಶ ಒದಗಿಸುತ್ತದೆ. ಅಷ್ಟೇ ಅಲ್ಲದೇ ಹವಾಮಾನ ಕ್ರಿಯೆಯ ಕ್ಷೇತ್ರದಲ್ಲಿ ಭವಿಷ್ಯದ ಪ್ರಯತ್ನಗಳಿಗಾಗಿ ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸುವ ಗುರಿಯನ್ನು ಇದು ಹೊಂದಿದೆ.
ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಸಮಸ್ಯೆಯನ್ನು ಎದುರಿಸಲು ಮಹತ್ವದ ನೀತಿ ಘೋಷಣೆಗಳು ಮತ್ತು ಬದ್ಧತೆಯ ಪುನರುಚ್ಛರಣೆಯನ್ನು ನಿರೀಕ್ಷಿಸುತ್ತಿರುವ ಅಂತಾರಾಷ್ಟ್ರೀಯ ಸಮುದಾಯ, ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣಕ್ಕಾಗಿ ಕುತೂಹಲದಿಂದ ಎದುರು ನೋಡುತ್ತಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಇದು ಪ್ರಧಾನಿ ಮೋದಿಯವರ ಆರನೇ ಭೇಟಿಯಾಗಿದ್ದು, ಅಲ್ಲಿಗೆ ತಲುಪುತ್ತಿದ್ದಂತೆಯೇ ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿಯವರನ್ನು ಆದರದಿಂದ ಬರಮಾಡಿಕೊಂಡರು.
ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಆರಂಭಿಕ ಸೆಷನ್ ನಲ್ಲಿ ಪ್ರಧಾನಿ ಪ್ರಧಾನ ಭಾಷಣ ಮಾಡಲಿದ್ದಾರೆ.ನಂತರ ಅವರು ಭಾರತ-ಯುಎ ಜಂಟಿ ಆತಿಥ್ಯ ವಹಿಸಿರುವ ಉನ್ನತ ಮಟ್ಟದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿಯವರು ಭಾರತ ಮತ್ತು ಸ್ವೀಡನ್ ಜಂಟಿ ಆತಿಥ್ಯವಹಿಸುತ್ತಿರುವ ಲೀಡ್ಐಡಿ-೨.೦ ಚಾಲನಾ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಪ್ರಧಾನಿಯವರು ವಿವಿಧ ದೇಶಗಳ ಪ್ರಧಾನಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ಕೂಡಾ ನಡೆಸಲಿದ್ದಾರೆ .
ಹಿಂದೂಸ್ತಾನ್ ಸಮಾಚಾರ್
