ಮುಂಬೈ,
ಆ್ಯಂಕರ್:ಉಕ್ಕಿನ ಉತ್ಪಾದನೆಗೆ ಹೆಸರುವಾಸಿಯಾಗಿರುವ ಜೆ ಎಸ್ ಡಬ್ಲ್ಯು ಗ್ರೂಪ್ ಈಗ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಭರ್ಜರಿಯಾಗಿ ಪ್ರವೇಶ ಮಾಡುತ್ತಿದೆ. ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆ ಜೊತೆ ಜೆ ಎಸ್ ಡಬ್ಲ್ಯು ಗ್ರೂಪ್ ಜಂಟಿ ವ್ಯವಹಾರ ಶುರು ಮಾಡಿದ್ದು, ಎರಡೂ ಸೇರಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಯೋಜಿಸಿವೆ. ಈ ವರ್ಷ ಡಿಸೆಂಬರ್ ನೊಳಗೆ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಆಗಲಿವೆ. ಪ್ರತೀ ಆರು ತಿಂಗಳಿಗೆ ಕನಿಷ್ಠ ಒಂದಾದರೂ ಕಾರ್ ಮಾಡಲ್ ಅನ್ನು ತಯಾರಿಸಿ ಬಿಡುಗಡೆ ಮಾಡುವುದು ಜೆಎಸ್ ಡಬ್ಲ್ಯೂ ಗ್ರೂಪ್ ನ ಪ್ಲಾನ್ ಆಗಿದೆ.
ಬಹಳ ಕಡಿಮೆ ಬೆಲೆಗೆ ಕಾರುಗಳ ತಯಾರಿಕೆ
ಜೆಎಸ್ ಡಬ್ಲ್ಯು ಎಂಜಿ ಮೋಟಾರ್ಸ್ ಸಂಸ್ಥೆ ಪ್ರೀಮಿಯಮ್ ಮತ್ತು ಮೇನ್ ಸ್ಟ್ರೀಮ್ ಎರಡೂ ಕೆಟಗರಿಯ ಕಾರುಗಳನ್ನು ತಯಾರಿಸಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನ ತರಲಿದ್ದು, ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತಮ್ಮ ಕಂಪನಿ ಮುಂಚೂಣಿಯಲ್ಲಿ ಇರುತ್ತದೆ ಎಂದು ಜೆ ಎಸ್ ಡಬ್ಲ್ಯೂ ಗ್ರೂಪ್ನ ಪಾರ್ಥ್ ಜಿಂದಾಲ್ ಹೇಳುತ್ತಾರೆ.
ಎಂಜಿ ಮೋಟಾರ್ಸ್ ಸಂಸ್ಥೆ ಜಾಗತಿಕವಾಗಿ ಪ್ರೀಮಿಯಮ್ ವಿಭಾಗದಲ್ಲಿ ಒಳ್ಳೆಯ ಮಾಡಲ್ ಗಳನ್ನು ಹೊಂದಿದೆ. ಇವುಗಳನ್ನು ಭಾರತದ ಮಾರುಕಟ್ಟೆಗೆ ತರುವ ಆಲೋಚನೆಯೂ ಜೆಎಸ್ ಡಬ್ಲ್ಯುಗೆ ಇದೆ.
