
ನವದೆಹಲಿ, 31 ಜನವರಿ:
ಆ್ಯಂಕರ್ : ವಿಮಾನ ಪ್ರಯಾಣದ ವೇಳೆ ಅಸ್ವಸ್ಥಗೊಂಡಿದ್ದ ಕರ್ನಾಟಕ ತಂಡದ ಆಟಗಾರ ಮಯಾಂಕ್ ಅಗರ್ವಾಲ್ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಣಜಿ ಪಂದ್ಯವಾಡಲು ತ್ರಿಪುರದಿಂದ ಗುಜರಾತ್ ಗೆ ತೆರಳಬೇಕಿದ್ದ ವಿಮಾನದಲ್ಲಿ ಮಯಾಂಕ್ ದ್ರವ ಪದಾರ್ಥವನ್ನು (ನೀರಿನ ಮಾದರಿ) ಸೇವಿಸಿದ್ದರು. ಇದರ ಬೆನ್ನಲ್ಲೇ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಪ್ರಾಣಾಪಾಯದಿಂದ ಪಾರಾಗಿರುವ ಮಯಾಂಕ್ ಅಗರ್ವಾಲ್ ತಮ್ಮ ಮ್ಯಾನೇಜರ್ ಮೂಲಕ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಏನಿದು ಘಟನೆ?
ತ್ರಿಪುರ ವಿರುದ್ಧದ ರಣಜಿ ಪಂದ್ಯದ ಬಳಿಕ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವಾಡಲು ಗುಜರಾತ್ ಗೆ ತೆರಳಬೇಕಿತ್ತು. ಅಲ್ಲದೆ ಸೂರತ್ ಗೆ ತೆರಳಲು ಇಂಡಿಗೋ ವಿಮಾನ ಹತ್ತಿದ್ದರು. ಈ ವೇಳೆ ವಿಮಾನದಲ್ಲಿ ಇಡಲಾಗಿದ್ದ ದ್ರವ ಪದಾರ್ಥವನ್ನು ಮಯಾಂಕ್ ಅಗರ್ವಾಲ್ ಕುಡಿದಿದ್ದಾರೆ.
ಇದರ ಬೆನ್ನಲ್ಲೇ ಅವರ ಗಂಟಲಿನಲ್ಲಿ ಉರಿಯ ಅನುಭವವಾಗಿದೆ. ಅಲ್ಲದೆ ಬಾಯಿ ಮತ್ತು ನಾಲಿಗೆ ಸುಟ್ಟಂತಹ ಅನುಭವ ಉಂಟಾಗಿದೆ. ಇದರಿಂದ ಅಸ್ವಸ್ಥಗೊಂಡ ಮಯಾಂಕ್ ಅವರನ್ನು ಕೂಡಲೇ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಈ ಬಗ್ಗೆ ತನಿಖೆ ನಡೆಸಲು ಮಯಾಂಕ್ ದೂರು ನೀಡಿದ್ದಾರೆ.
