
ಭುವನೇಶ್ವರ್, 1 ಫೆಬ್ರವರಿ :
ಆ್ಯಂಕ್ಯರ್ : ಎಫ್ ಐ ಹೆಚ್ ಮಹಿಳಾ ಹಾಕಿ ಪ್ರೊಲೀಗ್ ೨೦೨೩-೨೪ ಇದೇ ೩ ರಿಂದ ೯ ರವರೆಗೆ ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನಂತರ ರೂರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಇದೇ ೧೨ ರಿಂದ ೧೮ ರವರೆಗೆ ಮುಂದುವರಿಯಲಿದೆ.
ಭಾರತ, ಚೀನಾ, ಅಮೆರಿಕಾ, ನೆದರ್ ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ಎಫ್ಐಎಚ್ ಹಾಕಿ ಪ್ರೊ ಲೀಗ್ ೨೦೨೩/೨೪ರಲ್ಲಿ ಭಾಗವಹಿಸಲಿದ್ದು, ಭುವನೇಶ್ವರದಲ್ಲಿ ಹಾಗೂ ರೂರ್ಕೆಲಾದಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಎಫ್ಐಎಚ್ ಹಾಕಿ ಪ್ರೊ ಲೀಗ್ ೨೦೨೩-೨೪ ರಲ್ಲಿ, ಭಾರತ ತನ್ನ ಮೊದಲ ಪಂದ್ಯವನ್ನು ನಾಡಿದ್ದು ಅಂದರೆ ಇದೇ ೩ ರಂದು ಚೀನಾ ವಿರುದ್ಧ ಆಡಲಿದೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಇದೇ ೪ ರಂದು ಚೀನಾ ವಿರುದ್ಧ, ನಂತರ ಅಮೆರಿಕಾ ಫೆಬ್ರವರಿ ೬ ರಂದು ಆಡಲಿದೆ. ಆಸ್ಟ್ರೇಲಿಯ ಇದೇ ೭ ರಂದು ಭಾರತವನ್ನು ಮತ್ತು ೯ ರಂದು ನೆದರ್ಲೆಂಡ್ಸ್ ಅನ್ನು ಎದುರಿಸಲಿದೆ. ನೆದರ್ಲ್ಯಾಂಡ್ಸ್ ತನ್ನ ಅಭಿಯಾನವನ್ನು ಫೆಬ್ರವರಿ ೩ ರಂದು ಅಮೆರಿಕಾ ವಿರುದ್ಧದ ಪಂದ್ಯದೊಂದಿಗೆ ಆರಂಭಿಸುತ್ತದೆ. ನೆದರ್ಲೆಂಡ್ಸ್ ಫೆಬ್ರವರಿ ೪ ರಂದು ಭಾರತವನ್ನು ಎದುರಿಸಲಿದೆ, ನಂತರ ಫೆಬ್ರವರಿ ೬ ರಂದು ಚೀನಾವನ್ನು ಎದುರಿಸಲಿದೆ. ಫೆಬ್ರವರಿ ೯ ರಂದು ಭುವನೇಶ್ವರದಲ್ಲಿ ಆಡುವ ಕೊನೆಯ ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
