ಕೋಲಾರ, ನವೆಂಬರ್ (ಹಿ.ಸ):
ಆ್ಯಂಕರ್ : ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಿಂದ ಆಚರಿಸಿ ಅನ್ನದಾಸೋಹ ನಡೆಸಲಾಯಿತು.
ಗ್ರಾಮದ ವಕ್ಕಲೇರಿ ಯೂತ್ಸ್ ಕನ್ನಡಿಗರ ಸಂಘ ಹಾಗೂ ವಿನಾಯಕ ಯುವಸೈನ್ಯದ ಸಹಯೋಗದಲ್ಲಿ ರಾಜ್ಯೋತ್ಸವ ಆಚರಿಸಿದ್ದು, ಭುವನೇಶ್ವರಿ ತಾಯಿಯ ಭವ್ಯ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಕನ್ನಡ ನಾಡು,ನುಡಿಯ ರಕ್ಷಣೆಗಾಗಿನಡೆಯುವ ಯಾವುದೇ ಹೋರಾಟದಲ್ಲಿ ನಾವು ಮುಂಚೂಣಿಯಲ್ಲಿ ಇರುತ್ತೇವೆ ಎಂದು ಶಪಥ ಮಾಡಿದರು.
ಕನ್ನಡ ಭಾಷೆ ಶ್ರೀಮಂತವಾಗಿದ್ದು, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇದೆ, ನಾಡಿಗೆ ಹೊರ ರಾಜ್ಯಗಳಿಂದ ಬರುವವರು ಇಲ್ಲಿ ಜೀವನ ಕಂಡು ಕೊಂಡಿದ್ದಾರೆ ಅವರು ಜತೆಗೆ ಕನ್ನಡ ಮಾತನಾಡುವದನ್ನು ಕಲಿಯಬೇಕು, ಇಲ್ಲಿನ ಭಾಷೆ, ಸಂಸ್ಕೃತಿಗೆ ಹೊಂದಿಕೊ0ಡು ಹೋಗಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ವಕ್ಕಲೇರಿ ಗ್ರಾಮಸ್ಥರು, ವಿವಿಧ ಸಮುದಾಯದ ಮುಖಂಡರು, ಯೂತ್ಸ್ ಕನ್ನಡಿಗರ ಸಂಘ ಹಾಗೂ ವಿನಾಯಕ ಯುವಸೈನ್ಯದ ಪದಾಧಿಕಾರಿಗಳು ಹಾಜರಿದ್ದರು.
ಚಿತ್ರ ;ಕೋಲಾರ ತಾಲ್ಲೂಕಿನ ವಕ್ಕಲೇರಿಯಲ್ಲಿ ಗ್ರಾಮದ ಯೂತ್ಸ್ ಕನ್ನಡಿಗರ ಸಂಘದಿ0ದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
