ಬಳ್ಳಾರಿ, 21 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಹಲಕುಂದಿ ಬಳಿ ನಿರ್ಮಾಣ ಹಂತದಲ್ಲಿರುವ ಹೊಸ ಬೈಪಾಸ್ ರಸ್ತೆ ಬಳಿ ಕಾರು ಹಾಗೂ ಟಾಟಾ ಏಸ್ ಮಧ್ಯೆ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಿಂಚೇರಿ ಗ್ರಾಮದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಾಯಗಳಾಗಿವೆ.
ಮೃತರು ಮಿಂಚೇರಿ ಗ್ರಾಮದ ನಿವಾಸಿಗಳಾದ ಕಂಪ್ಲಿ ಹುಸೇನ್ (55) ಮತ್ತು ಮುಸ್ಕಿಲ್ (35). ಇವರು ಹಳೆಯ ಟೈರ್ಗಳ ರಿಬಟನಿಂಗ್ ಮಾಡುವ ಕೆಲಸ ಮುಗಿಸಿಕೊಂಡು ಟಾಟಾ ಏಸ್ನಲ್ಲಿ ಮಿಂಚೇರಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮಹಾಂತೇಶ್ ಹಾಗು ಇನ್ನೊಬ್ಬರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಮಹಾಂತೇಶ್ ಹಾಗೂ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
