ನವದೆಹಲಿ, 21ಅಕ್ಟೋಬರ್ :
ಆ್ಯಂಕರ್ :
ದೇಶಾದ್ಯಂತ ಇಂದು ಪೊಲೀಸ್ ಸಂಸ್ಮರಣಾ ದಿನ ಆಚರಿಸಲಾಗುತ್ತಿದೆ. ೧೯೫೯ನೇ ಸಾಲಿನ ಅಕ್ಟೋಬರ್ ೨೧ರಂದು ಲಡಾಖ್ನ ಹಾಟ್ಸ್ಪ್ರಿಂಗ್ಸ್ ಗಡಿಯಲ್ಲಿ ಚೀನಾ ಪಡೆಗಳ ದಾಳಿಗೆ ಹುತಾತ್ಮರಾದ ೧೦ ಸಿಆರ್ಪಿಎಫ್ ಯೋಧರ ಸ್ಮರಣಾರ್ಥ ಪ್ರತಿ ವರ್ಷ ಈ ದಿನ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡ ಪೊಲೀಸರನ್ನು ಈ ದಿನ ಸ್ಮರಿಸಲಾಗುತ್ತದೆ. ಇಂದು ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮರಾದ ಎಲ್ಲ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿದರು. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಪ್ರಧಾನಿ, ಪೊಲೀಸ್ ಸಿಬ್ಬಂದಿಯು ಉತ್ತಮ ಬೆಂಬಲದ ಆಧಾರ ಸ್ತಂಭಗಳಾಗಿದ್ದು ಸವಾಲುಗಳ ಮೂಲಕ ನಾಗರಿಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಜತೆಗೆ ಸುರಕ್ಷತೆಯನ್ನು ಖಾತ್ರಿಪಡಿಸುತ್ತಾರೆ. ಅವರ ಅಚಲವಾದ ಸೇವೆಯ ಬದ್ಧತೆಯು ವೀರತ್ವದ ನಿಜವಾದ ಮನೋಭಾವವನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.
