ಮುಂಬೈ,17 ಫೆಬ್ರವರಿ :
ಆ್ಯಂಕರ್:ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ನಿರ್ಬಂಧ ಕ್ರಮ ಜರುಗಿಸಿರುವ ಆರ್ ಬಿಐ, ಈಗ ಇದರ ಡೆಡ್ಲೈನ್ ಅನ್ನು ಫೆಬ್ರುವರಿ 29ರಿಂದ ಮಾರ್ಚ್ 15ಕ್ಕೆ ವಿಸ್ತರಿಸಿದೆ. ಪೇಮೆಂಟ್ಸ್ ಬ್ಯಾಂಕ್ ನ ಗ್ರಾಹಕರ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು, ಅದರಲ್ಲೂ ವರ್ತಕರು, ಪೇಟಿಎಂ ವ್ಯಾಲಟ್ ಉಪಯೋಗಿಸುತ್ತಿರುವವರು, ಫಾಸ್ ಟ್ಯಾಗ್, ನ್ಯಾಷನಲ್ ಮೊಬಿಲಿಟಿ ಕಾರ್ಡ್ ಇತ್ಯಾದಿ ಬಳಸುತ್ತಿರುವವರು ತುಸು ನಿರಾಳರಾಗಬಹುದು. ಪೇಟಿಎಂ ಸಂಸ್ಥೆಗೂ ಈ ಡೆಡ್ ಲೈನ್ ಸ್ವಲ್ಪ ಉಸಿರಾಡಲು ಅವಕಾಶ ಕೊಡಬಹುದು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫೆಬ್ರುವರಿ 29ರ ಬಳಿಕ ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ, ಹೊಸ ಕ್ರೆಡಿಟ್ ಟ್ರಾನ್ಸಾಕ್ಷನ್ ನಡೆಸುವಂತಿಲ್ಲ ಎಂದು ಜನವರಿ 31ರಂದು ಆರ್ಬಿಐ ನಿರ್ಬಂಧ ಹೇರಿತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆ ಜೋಡಿತವಾದ ಯವುದೇ ಸೇವೆಯೂ ಫೆಬ್ರುವರಿ 29ರ ಬಳಿಕ ಸಾಧ್ಯವಾಗುವುದಿಲ್ಲ. ಈಗ ಇದರ ಗಡುವನ್ನು ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ.
ಮಾರ್ಚ್ 15ರವರೆಗೂ ಪೇಟಿಎಂ ಗ್ರಾಹಕರು ತಮ್ಮ ವ್ಯಾಲಟ್ಗೆ ಹಣ ತುಂಬಿಸಿ ಅದರ ಮೂಲಕ ವಹಿವಾಟು ನಡೆಸಬಹುದು. ಫಾಸ್ಟ್ಯಾಗ್ ಉಪಯೋಗಿಸಬಹುದು. ಪೇಮೆಂಟ್ಸ್ ಬ್ಯಾಂಕ್ನಲ್ಲೂ ಅಲ್ಲಿಯವರೆಗೆ ಹೊಸ ಡೆಪಾಸಿಟ್ ಇಡಬಹುದು. ಆದರೆ, ಮಾರ್ಚ್ 15ರ ಬಳಿಕ ಇದು ಸಾಧ್ಯವಾಗುವುದಿಲ್ಲ. ತಮ್ಮ ಖಾತೆಯಲ್ಲಿರುವ ಹಣ ಪೂರ್ಣ ಮುಗಿಯುವವರೆಗೂ ಗ್ರಾಹಕರು ಅದನ್ನು ಬಳಕೆ ಮಾಡಲು ಮಾರ್ಚ್ 15ರ ನಂತರವೂ ಅವಕಾಶ ಇರುತ್ತದೆ.
