ಬೆಂಗಳೂರು,17 ಫೆಬ್ರವರಿ :
ಆ್ಯಂಕರ್:
ನಿನ್ನೆ ಸ್ಯಾಂಡಲ್ ವುಡ್ನ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈ ಬೆನ್ನಲ್ಲೇ ದಚ್ಚು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ಪೂರೈಸಿದ ಹಿನ್ನೆಲೆ ಡಿ-25 ಎಂಬ ರಜತ ಮಹೋತ್ಸವ ಕಾರ್ಯಕ್ರಮವನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಆಯೋಜಿಸಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್. ಮೆಜೆಸ್ಟಿಕ್ ಮೂಲಕ ಚಂದನವನದಲ್ಲಿ ಧೂಳೆಬ್ಬಿಸಿ ಕಲಾಸಿಪಾಳ್ಯವನ್ನ ಸಂಗೊಳ್ಳಿರಾಯಣ್ಣನಾಗಿ ಆಳಿದ ಸಾರಥಿ. ಅಭಿಮಾನಿಗಳ ಪಾಲಿನ ಯಜಮಾನ ಕಾಟೇರನಾಗಿ ಸಕ್ಸಸ್ ಕಂಡು ಈಗ ಡೆವಿಲ್ ಅವತಾರ ತಾಳಿದ್ದಾರೆ. ನಿನ್ನೆಯಷ್ಟೇ 47 ನೇ ವಸಂತಕ್ಕೆ ಕಾಲಿಟ್ಟಿದ್ದು, ಈಗ ಮತ್ತೊಂದು ಸಂಭ್ರಮಕ್ಕೆ ಸಜ್ಜಾಗಿದ್ದಾರೆ.ತಮ್ಮ ಸಿನಿಮಾಗಳ ಮೂಲಕ ಕನ್ನಡಿಗರಿಗೆ ರಂಜಿಸುತ್ತಾ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿರುವ ನಟ ದರ್ಶನ್ ಸಿನಿಮಾ ಜರ್ನಿ ಆರಂಭಿಸಿ ಇವತ್ತಿಗೆ 25 ವಸಂತ.. ಈ ಸಂಭ್ರಮವನ್ನ ಆಚರಿಸಲು ಡಿ-25 ಬೆಳ್ಳಿ ಪರ್ವ ಹೆಸರಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದರ್ಶನ್ ಆಪ್ತ, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಡಿ-25 ಅಭಿನಂದನಾ ಕಾರ್ಯಕ್ರಮದ ರೂವಾರಿಯಾಗಿದೆ. ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಂದು ಸಂಜೆ 5 ಗಂಟೆಗೆ ರಜತ ಮಹೋತ್ಸವ ನಡೆಸಲಾಗ್ತಿದ್ದು ಬೃಹತ್ ವೇದಿಕೆ ಸಿದ್ದವಾಗ್ತಿದೆ. ಆದಿಚುಂಚನಗಿರಿ ಶ್ರೀ, ಸುತ್ತೂರು ಸ್ವಾಮೀಜಿ, ಸಂಸದೆ ಸುಮಲತಾ ಸೇರಿ ಹಲವು ನಟ-ನಟಿಯರು ಭಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ನಟ-ನಟಿಯರು ದರ್ಶನ್ ಚಲನಚಿತ್ರದ ಗೀತೆಗಳಿಗೆ ನೃತ್ಯ ಮಾಡಲಿದ್ದಾರೆ. ಇದರೊಂದಿಗೆ ಕೆಲ ಸಾಮಾಜಿಕ ಕಾರ್ಯಕ್ರಮವನ್ನು ಪ್ಲಾನ್ ಮಾಡಿಕೊಳ್ಳಲಾಗಿದೆ.
