ಮುಂಬೈ,
ಇದೇ ತಿಂಗಳ ೩೧ರ ಭಾನುವಾರದಂದು ಎಲ್ಲ ಬ್ಯಾಂಕ್ಗಳ ಶಾಖೆಗಳು ಕಾರ್ಯನಿರ್ವಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನ ಸರ್ಕಾರದ ಸ್ವೀಕೃತಿ ಮತ್ತು ಪಾವತಿಗಳಿಗೆ ಅನುಕೂಲವಾಗುವಂತೆ ವಹಿವಾಟುಗಳನ್ನು ನಡೆಸಲು ಬ್ಯಾಂಕ್ಗಳು ಕರ್ತವ್ಯ ನಿರ್ವಹಿಸಬೇಕೆಂಬ ಸರ್ಕಾರದ ಮನವಿ ಮೇರೆಗೆ ಆರ್ಬಿಐ ಈ ಸೂಚನೆಯನ್ನು ನೀಡಿದೆ.
ಭಾನುವಾರದಂದು ಸಹ ಬ್ಯಾಂಕ್ ಸೇವೆಗಳು ಲಭ್ಯವಿರುವ ಬಗ್ಗೆ ಜನರಿಗೆ ಮಾಹಿತಿ ನೀಡಲು ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಆರ್ಬಿಐ ಎಲ್ಲ ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದೆ.
