ನವದೆಹಲಿ, 10 ಮಾರ್ಚ್ :
ಆ್ಯಂಕರ್:ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಸತತ ಏರಿಕೆ ಕಂಡಿದೆ. ಮಾರ್ಚ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 6.55 ಬಿಲಿಯನ್ ಡಾಲರ್ ನಷ್ಟು ಏರಿ 625.626 ಬಿಲಿಯನ್ ಡಾಲರ್ ಮಟ್ಟ ತಲುಪಿದೆ. ಹಿಂದಿನ ವಾರದಲ್ಲಿ (ಫೆ. 23) 2.975 ಬಿಲಿಯನ್ ಡಾಲರ್ ನಷ್ಟು ಏರಿಕೆ ಆಗಿತ್ತು. ಮಾರ್ಚ್ 1ರ ವಾರದಲ್ಲಿ ಎಸ್ಡಿಆರ್ ಮತ್ತು ಐಎಂಎಫ್ನಲ್ಲಿನ ನಿಧಿ ಕಡಿಮೆ ಆದರೂ ಕೂಡ ಒಟ್ಟಾರೆ ಫಾರೆಕ್ಸ್ ಸಂಪತ್ತು ಗಣನೀಯವಾಗಿ ಹೆಚ್ಚಿದೆ. ಇದರಲ್ಲಿ ಬಹುಪಾಲು ವಿದೇಶೀ ಕರೆನ್ಸಿ ಸಂಪತ್ತು ಹೆಚ್ಚಳ ಕಾರಣವಾಗಿದೆ. ಇದು 6.043 ಬಿಲಿಯನ್ ಡಾಲರ್ನಷ್ಟು ಏರಿದೆ. ಚಿನ್ನದ ಮೀಸಲು ತೀರಾ ಹೆಚ್ಚಿಲ್ಲವಾದರೂ 569 ಮಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ.
ಎಸ್ ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 17 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಐಎಂಎಫ್ನಲ್ಲಿ ಭಾರತ ಇರಿಸುವ ನಿಧಿ 41 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ ಎಂದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ.
