ಮಂಗಳೂರು, 10 ಮಾರ್ಚ್ :
ಆ್ಯಂಕರ್: ಡಿ-ಬಾಸ್ ಎಂದರೆ ಸಾಕು ಸಾಮಾನ್ಯ ಜನರಿಂದ ಹಿಡಿದು ಪ್ರಸಿದ್ಧ ವ್ಯಕ್ತಿ (ಸೆಲೆಬ್ರಿಟಿ)ಗಳಿಗೆ ಏನೋ ಒಂದು ವಿಶೇಷ ಅಭಿಮಾನದ ಜೊತೆಗೆ ಪ್ರೀತಿ, ಗೌರವ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಕಾಟೇರ ಸಿನಿಮಾ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು. ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ಚಾಲೆಂಜಿಂಗ್ ಸ್ಟಾರ್ ಒಂದು ವಿಶೇಷ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸ್ಯಾಂಡಲ್ ವುಡ್ ನ ದಾಸ ದರ್ಶನ್ ಅವರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮಂಗಳೂರಿನ ಹೊರ ವಲಯದಲದಲ್ಲಿರುವ ಕುತ್ತಾರು ಕೊರಗ ತನಿಯ ಆದಿ ಸ್ಥಳಕ್ಕೆ ದರ್ಶನ್ ಭೇಟಿ ನೀಡಿದ ವೇಳೆ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದೇ ಸಮಯದಲ್ಲಿ ದರ್ಶನ್ ಅವರಿಗೆ ಕೊರಗಜ್ಜ ಕ್ಷೇತ್ರದಿಂದ ವಿಶೇಷ ಗೌರವ, ಸನ್ಮಾನ ಮಾಡಲಾಯಿತು. ಇನ್ನು ದರ್ಶನ್ ಬಂದಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದರು. ಕೆಲ ಅಭಿಮಾನಿಗಳು ಸೆಲ್ಫಿ ಕೂಡ ತೆಗೆದುಕೊಂಡು ಖುಷಿ ವ್ಯಕ್ತಪಡಿಸಿದರು.
