ನವದೆಹಲಿ, 19ಅಕ್ಟೋಬರ್ :
ಆ್ಯಂಕರ್ :
ಹಬ್ಬದ ಸಂದರ್ಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಕ್ಕರೆ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಸಕ್ಕರೆ ಮೇಲಿನ ನಿರ್ಬಂಧವನ್ನು ಅಕ್ಟೋಬರ್ ೩೧ರ ನಂತರವೂ ಮುಂದುವರೆಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಐರೋಪ್ಯ ಒಕ್ಕೂಟ ಮತ್ತು ಅಮೆರಿಕಾ ಸೇರಿದಂತೆ ಕೆಲವು ದೇಶಗಳೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಂತೆ ರಫ್ತು ಮುಂದುವರೆಯಲಿದೆ. ಉಳಿದಂತೆ ಅಕ್ಟೋಬರ್ ೩೧ರ ನಂತರವೂ ನಿರ್ಬಂಧನೆ ಮುಂದುವರೆಸಲು ವಾಣಿಜ್ಯ ಸಚಿವಾಲಯ ಪ್ರಕಟಣೆ ತಿಳಿಸಿದೆ.
