ದೆಹಲಿ, 7 ಜನವರಿ(ಹಿ.ಸ):
ಆ್ಯಂಕರ್ :
೨೦೨೨-೨೦೨೩ರ ಹಣಕಾಸು ವರ್ಷದಲ್ಲಿ ಭಾರತವು ೬೦ ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ ಎಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತಮ ಗುಣಮಟ್ಟದ ಮಾನದಂಡಗಳು ಭಾರತವು ಉನ್ನತ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಹಾಯ ಮಾಡುತ್ತದೆ.ದೇಶದ ೩೪೦ ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಲ್ ಮಾರ್ಕಿಂಗ್ ಸೌಲಭ್ಯಗಳಿವೆ ಮತ್ತು ಪ್ರತಿದಿನ ಸುಮಾರು ೪.೫ ಲಕ್ಷ ವಸ್ತುಗಳನ್ನು ಹಾಲ್ ಮಾರ್ಕ್ ಮಾಡಲಾಗುತ್ತದೆ ಎಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಸರ್ಕಾರದ ಪ್ರಯತ್ನವನ್ನು ಶ್ಲಾಘಿಸಿದ ಕೇಂದ್ರ ಸರಕಾರ, ೨೦೧೪ ಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಆಟಿಕೆಗಳ ಆಮದು ಶೇಕಡಾ ೫೨ ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.
ಹಿಂದೂಸ್ತಾನ್ ಸಮಾಚಾರ್
