ನವದೆಹಲಿ, 5 ನವೆಂಬರ್ (ಹಿ.ಸ):
ಆ್ಯಂಕರ್ :ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪ್ರತಿ ಕೆ.ಜಿ ಈರುಳ್ಳಿಯನ್ನು ೨೫ ರೂಪಾಯಿ ದರದಲ್ಲಿ ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಉತ್ಪಾದನೆ ವಿಳಂಬವಾಗಿರುವ ಕಾರಣದಿಂದ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ನಫೆಡ್, ಕೇಂದ್ರೀಯ ಭಂಡಾರ, ಎನ್ಸಿಸಿಎಫ್ ಹಾಗೂ ರಾಜ್ಯ ಸಹಕಾರ ಒಕ್ಕೂಟಗಳ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಒದಗಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾರ್ಯೋನ್ಮುಖವಾಗಿದೆ. ೨೧ ರಾಜ್ಯಗಳ ೫೫ ನಗರಗಳಲ್ಲಿ ನಫೆಡ್ ಸಂಸ್ಥೆ, ಚಿಲ್ಲರೆ ಮಾರುಕಟ್ಟೆ ಮತ್ತು ಸಂಚಾರಿ ವಾಹನಗಳ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ಎನ್ಸಿಸಿಎಫ್ ಸಂಸ್ಥೆ, ೨೦ ರಾಜ್ಯಗಳ ೫೪ ನಗರಗಳಲ್ಲಿ ಈರುಳ್ಳಿ ಮಾರಾಟಕ್ಕಾಗಿ ೪೫೭ ಮಾರಾಟ ಕೇಂದ್ರಗಳನ್ನು ತೆರೆದಿದೆ. ಕೇಂದ್ರೀಯ ಭಂಡಾರ, ನಿನ್ನೆನಿಂದ ದೆಹಲಿಯ ಎನ್ಸಿಆರ್ ವಲಯದಲ್ಲಿ ಈರುಳ್ಳಿ ಮಾರಾಟ ಆರಂಭಿಸಿದ್ದು, ಸಫಲ್ ಮದರ್ ಡೈರಿ ಮೂಲಕ ಮುಂದಿನ ವಾರ ಈರುಳ್ಳಿ ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಿದೆ.
ಹಿಂದೂಸ್ತಾನ್ ಸಮಾಚಾರ್
