ನವದೆಹಲಿ, 26 ಫೆಬ್ರವರಿ :
ಆ್ಯಂಕರ್:
ನವದೆಹಲಿಯ ಭಾರತ್ ಮಂಟಪಂನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾರತ್ ಟೆಕ್ಸ್ ೨೦೨೪ ಅನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ೪ ದಿನಗಳ ಟೆಕ್ಸ್ ಟೈಲ್ ಸಮಾರಂಭವು ಜಾಗತಿಕ ಜವಳಿ ಸಮಾರಂಭಗಳಲ್ಲಿಯೇ ಅತಿದೊಡ್ಡದು ಎಂದು ಪರಿಗಣಿಸಲ್ಪಟ್ಟಿದೆ. ಭಾರತ ಟೆಕ್ಸ್ – ೨೦೨೪ ಸುಮಾರು ೬೫ ಸಭೆಗಳನ್ನು ಒಳಗೊಂಡಿರಲಿದ್ದು, ಈ ಕ್ಷೇತ್ರ ಎದುರಿಸುತ್ತಿರುವ ಹಲವು ವಿಷಯಗಳ ಬಗ್ಗೆ ಜಾಗತಿಕ ಭಾಗಿದಾರರು ಚರ್ಚಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಾಗತಿಕ ಸಿಇಒ ಗಳು ೩ ಸಾವಿರದ ೫೦೦ಕ್ಕೂ ಹೆಚ್ಚು ವಸ್ತು ಪ್ರದರ್ಶನಗಳು ಹಾಗೂ ೩ ಸಾವಿರ ಖರೀದಿದಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೇ ೪೦ ಸಾವಿರ ಉದ್ಯಮಿಗಳು, ವಿದ್ಯಾರ್ಥಿಗಳು, ನೇಕಾರರು, ಕಲಾವಿದರು ಹಾಗೂ ಜವಳಿ ಕಾರ್ಮಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
