ಢಾಕಾ, 7 ಜನವರಿ(ಹಿ.ಸ):
ಆ್ಯಂಕರ್ :
ಸುಮಾರು ೧೮೦ ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಬಾಂಗ್ಲಾದೇಶದಲ್ಲಿ ೧೨ ನೇ ರಾಷ್ಟ್ರೀಯ ಚುನಾವಣೆಯಲ್ಲಿ ೩೦೦ ಸಂಸದರನ್ನು ಆಯ್ಕೆ ಮಾಡಲು ಇಂದು ಮತದಾನ ಆರಂಭವಾಗಿದೆ. ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಆಯೋಗವು ೨೦೨೪ ರ ಜನವರಿ ೬ ರಂದು ಮತಪೆಟ್ಟಿಗೆಗಳು ಮತ್ತು ಇತರ ಸಾಮಗ್ರಿಗಳು ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ದೇಶಾದ್ಯಂತದ ಮತದಾನ ಕೇಂದ್ರಗಳಿಗೆ ಹಸ್ತಾಂತರಿಸಿದೆ. ಈ ಬಾರಿ ೯೦ ಮಹಿಳೆಯರು ಮತ್ತು ೭೯ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಅಭ್ಯರ್ಥಿಗಳು ಸೇರಿದಂತೆ ೧,೯೭೦ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ೨೮ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ, ದಾಖಲೆಯ ೭೪೭ ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅವರಲ್ಲಿ ಹೆಚ್ಚಿನವರು ಆಡಳಿತಾರೂಢ ಅವಾಮಿ ಲೀಗ್ ಗೆ ಸೇರಿದವರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
