ಮುಂಬೈ,21ನವೆಂಬರ್ (ಹಿ.ಸ):
ಆ್ಯಂಕರ್ :ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ಸಿನಿಮಾಗಳು ಅದರ ಮೂಲ ಭಾಷೆಯ ಜೊತೆಗೆ ಒಟ್ಟು ಐದು ಬೇರೆ-ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತವೆ. ‘ಆರ್ಆರ್ಆರ್’ ಅಂಥಹಾ ಸಿನಿಮಾಗಳು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿಯ ಜೊತೆಗೆ ಜಪಾನಿ, ಚೀನಿ ಭಾಷೆಗೂ ಡಬ್ ಆಗಿ ಆಗಿದ್ದುಂಟು. ಆದರೆ ಸೂರ್ಯ ನಟಿಸುತ್ತಿರುವ ಹೊಸ ಸಿನಿಮಾ ಒಂದು ಬರೋಬ್ಬರಿ 38 ಭಾಷೆಗಳಲ್ಲಿ ಒಮ್ಮೆಗೆ ಬಿಡುಗಡೆ ಆಗಲಿದೆ. ಈ ವಿಷಯವನ್ನು ಸ್ವತಃ ಸಿನಿಮಾದ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.
ಸೂರ್ಯ ಪ್ರಸ್ತುತ ‘ಕಂಗುವ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಐತಿಹಾಸಿಕ, ಥ್ರಿಲ್ಲರ್, ಮೈಥಾಲಜಿ ಅಂಶಗಳನ್ನು ಹೊಂದಿರುವ ಕತೆಯನ್ನು ಒಳಗೊಂಡ ಸಿನಿಮಾ. ಅದ್ಧೂರಿ ಸೆಟ್ಗಳನ್ನು ಹಾಕಿ ಭಾರಿ ಅದ್ಧೂರಿಯಾಗಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾಕ್ಕೆ ಕೆಇ ಜ್ಞಾನವೇಲ್ ರಾಜಾ ಬಂಡವಾಳ ಹೂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಕಂಗುವ’ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆಇ ಜ್ಞಾನವೇಲ್ ರಾಜಾ ‘ನಮ್ಮ ಸಿನಿಮಾ 38 ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ’ ಎಂದಿದ್ದಾರೆ. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೊಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದಾರೆ. ಹಾಗಾಗಿ ವಿಶ್ವದ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡಿಸಿ ಏಕಕಾಲಕ್ಕೆ ಬಿಡುಗಡೆ ಮಾಡುವುದು ಅವರ ಆಲೋಚನೆ.
ಹಿಂದೂಸ್ತಾನ್ ಸಮಾಚಾರ್
