ಕಲಬುರಗಿ , 14ನವೆಂಬರ್ (ಹಿ.ಸ):
ಆ್ಯಂಕರ್ :
ದೀಪಾವಳಿಯ ಮುಂದುವರಿದ ಭಾಗದಂತೆ ಆಚರಿಸಲ್ಪಡುವ ಕಾರ್ತಿಕ ದೀಪೋತ್ಸವ
, ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷವಾದ ಮಹತ್ವವಿದೆ. ಭಗವಂತನ ಪ್ರಿತ್ಯಾರ್ಥವಾಗಿ ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ದೀಪ ಬೆಳಗಬೇಕು, ಕಾರ್ತಿಕ್ ಮಾಸದಲ್ಲಿ ದೀಪಾರಾಧನೆ ಅತ್ಯಂತ ಶ್ರೇಷ್ಠ ಮತ್ತು ಸಕಲೈಶ್ವರ್ಯ ಸಂಪತ್ತು ಪ್ರಾಪ್ತಿ ಆಗುತ್ತದೆ. ಪ್ರತಿ ವರ್ಷದಂತೆ ಕರುಣೇಶ್ವರ ನಗರದ ಶ್ರೀ ಜೈ ಹನುಮಾನ್ ಮಂದಿರದಲ್ಲಿ ಕಾರ್ತಿಕ ದೀಪೋತ್ಸವವನ್ನು ನವೆಂಬರ್ 14 ರಿಂದ ಡಿಸೆಂಬರ್ 12ರವರೆಗೆ ಪ್ರತಿದಿನ ಸಾಯಂಕಾಲ 7:00 ಆಚರಿಸಲಾಗುವುದು, ಅಲ್ಲದೆ ಪ್ರತಿದಿನ ವಿಶೇಷ ಪೂಜೆ ಅಲಂಕಾರ ನೈವೇದ್ಯ ಮಾಡಲಾಗುವುದು. ಭಕ್ತರು ಮತ್ತು ಸೇವಾ ಕರ್ತರು ಪ್ರತಿದಿನ ಕಾರ್ತಿಕ ದೀಪೋತ್ಸವದಲ್ಲಿ ಭಾಗಿಯಾಗಿ ಶ್ರೀಜೈವೀರ್ ಹನುಮನ ಕೃಪೆಗೆ ಪಾತ್ರರಾಗಲು ದೇವಸ್ಥಾನ ಗೌರವ ಅಧ್ಯಕ್ಷರಾದ ಶ್ರೀ ಅವಿನಾಶ್ ಕುಲಕರ್ಣಿ ರೇವೂರ್ ಮತ್ತು ಅಧ್ಯಕ್ಷರಾದ ಶ್ರೀ ಶೇಷಗಿರಿ ಕುಲಕರ್ಣ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
