ಗಂಗಾವತಿ, 16 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ಗಂಗಾವತಿ ಪಟ್ಟಣದ ಜಯನಗರದಲ್ಲಿರುವ ಪರಿಶಿಷ್ಟ ಪಂಗಡಗಳ ಮೆಟ್ರಿಕ್ ನಂತರದ ವಿಧ್ಯಾರ್ಥಿ ನಿಯರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸಚಿವರು ವಿದ್ಯಾರ್ಥಿಗಳ ಮಲಗುವ ಕೊಠಡಿ.ಕಂಪ್ಯೂಟರ್ ಲ್ಯಾಬ್ .ವಿದ್ಯುತ್ ವ್ಯವಸ್ಥೆ ಸೇರಿದಂತೆ ಹಾಸ್ಟಲ್ ಗೆ ನೀರು ಪೂರೈಕೆಯಾಗುವ ಸಿಂಟೆಕ್ಸ್ ಗಳನ್ನ ಖುದ್ದು ಪರಿಶೀಲಿಸಿದ ಸಚಿವರು ಅವ್ಯವಸ್ಥೆ ಕಂಡು ಹಾಸ್ಟಲ್ ಸಿಬ್ಬಂದಿ ಹಾಗೂ ವಾರ್ಡನ್ ಗಳ ಮೇಲೆ ಗರಂ ಅದರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಬೇಜವಾಬ್ದಾರಿಯುತ ವಾಗಿ ನಡೆದುಕೊಂಡಿರು ಹಾಸ್ಟಲ್ ಸಿಬ್ಬಂದಿ ವಾರ್ಡ್ ನ್ ರ ಮೇಲೆ ಕ್ರಮ ಜರುಗಿಸಲು ಸೂಚಿಸಿದರು.
ನಂತರ ವಿದ್ಯಾರ್ಥಿನಿರ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡ ಸಚಿವರು ಹಾಸ್ಟಲ್ ನ .ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಸ್ಥಳದಲ್ಲೆ ಜನರೇಟರ್ ಖರೀದಿ ಮಾಡುವಂತೆ ಸೂಚಿಸಿದರಲ್ಲದೆ ಗುಣಮಟ್ಟದ ಊಟ ಸೇರಿದಂತೆ ಎಲ್ಲಾ ಎಲ್ಲಾ ರೀತಿಯ ಸೌಲಭ್ಯಗಳನ್ನ ಅಚ್ಚುಕ್ಟಾಗಿ ವಿದ್ಯಾರ್ಥಿಗಳಿಗೆ ಒದಗಿಸುವಂತೆ ತಾಖೀತು ಮಾಡಿದರು.
ಹಿಂದೂಸ್ತಾನ್ ಸಮಾಚಾರ್
