
ಮುಂಬೈ,15ನವೆಂಬರ್ (ಹಿ.ಸ):
ಆ್ಯಂಕರ್ :
ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್(75) ನಿನ್ನೆ(ಮಂಗಳವಾರ) ಮುಂಬೈನಲ್ಲಿ ನಿಧನರಾಗಿದ್ದಾರೆ. ಸುಬ್ರತಾ ರಾಯ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸುಬ್ರತಾ ರಾಯ್ ಅವರನ್ನು ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಬ್ರತಾ ರಾಯ್ ಅವರು ಇಹಲೋಕ ತ್ಯಜಿಸಿದ್ದಾರೆ.
ನಮ್ಮ ಗೌರವಾನ್ವಿತ ‘ಸಹರಾಶ್ರೀ’ ಸುಬ್ರತಾ ರಾಯ್ ಸಹಾರಾ ಅವರ ನಿಧನದ ಸುದ್ದಿಯನ್ನು ತಿಳಿಸಲು ತೀವ್ರ ದುಃಖವೆನಿಸುತ್ತದೆ ಎಂದು ಸಹಾರಾ ಇಂಡಿಯಾ ಪರಿವಾರ್ ತಿಳಿಸಿದೆ. ಸ್ಪೂರ್ತಿದಾಯಕ ನಾಯಕ ಮತ್ತು ದಾರ್ಶನಿಕ ಸಹರಾಶ್ರೀ ಜಿ ಅವರು ಮಂಗಳವಾರ ರಾತ್ರಿ 10.30 ಕ್ಕೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಸುಬ್ರತಾ ರಾಯ್ ಅವರು ಮೆಟಾಸ್ಟಾಟಿಕ್ ಮಾರಣಾಂತಿಕತೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ವಿರುದ್ಧ ದೀರ್ಘಕಾಲ ಹೋರಾಡಿ ನಿಧನರಾದರು.
ಹಿಂದೂಸ್ತಾನ್ ಸಮಾಚಾರ್
