ಬೆಳಗಾವಿ,27ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಹುಲಿ ಉಗುರಿನ ಪ್ರಕರಣಗಳು ದಿನಕ್ಕೊಂದರಂತೆ ಹೊರ ಬರುತ್ತಿದ್ದು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಮನೆಯ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಸಚಿವೆಯ ಪುತ್ರ ಮೃಣಾಲ್ ಪುತ್ರ ಹುಲಿಉಗುರಿನ ಮಾದರಿಯ ಪೆಂಟೆಂಡ್ ಸರವನ್ನು ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಕುರಿತು ಇಂದು ಬೆಳಗ್ಗೆ ಅರಣ್ಯ ಇಲಾಖೆಯ ಡಿಎಫ್ಓ ಶಂಕರ್ ಕಲ್ಲೋಳಿಕರ್, ಎಸಿಎಫ್ ಸುರೇಶ್ ತೇಲಿ ಸೇರಿ, 15 ರಿಂದ 20 ಅಧಿಕಾರಿಗಳು ಬೆಳಗಾವಿಯ ಕುವೆಂಪು ನಗರದಲ್ಲಿರುವ ಮೃಣಾಲ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೂರವಾಣಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಶೀಲನೆ ನಡೆಸಿ ನ್ಯಾಯ ರೀತಿ ಕ್ರಮಗಳನ್ನು ಮುಂದುವರೆಸುವಂತೆ ಸಲಹೆ ನೀಡಿದರು ಎನ್ನಲಾಗಿದೆ.
ಆ ಹಿನ್ನೆಲೆಯಲ್ಲಿ ಹುಲಿ ಪೆಂಡೆಂಟ್ ಎಲ್ಲಿಂದ ಬಂತು, ಯಾರು ನೀಡಿದ್ದಾರೆಂದು ಅರಣ್ಯ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಎಷ್ಟು ವರ್ಷದಿಂದ ಪೆಂಡೆಂಟ್ ಧರಿಸಿದ್ದೀರಿ ಎಂಬೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಉತ್ತರಿಸಿರುವ ಮೃಣಾಲ್ ನನ್ನ ಮದುವೆಯಲ್ಲಿ ಸಂಬಂಧಿಕರು ಉಡುಗೊರೆ ನೀಡಿದ್ದು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಪ್ಲಾಸ್ಟಿಕ್ದು ಎಂಬ ಕಾರಣಕ್ಕೆ ಹಾಕಿಕೊಳ್ತಿದ್ದೆ ಎಂದಿದ್ದಾರೆ ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್
