ಕೋಲಾರ, ಡಿಸೆಂಬರ್ ೩೦ (ಹಿ.ಸ) :
ಆ್ಯಂಕರ್ : ರಾಯಚೂರಿನಲ್ಲಿ ನಡೆದ ಪ್ರಥಮ ಅಂತರ ಮಹಿಳಾ ಮತ್ತು ಪುರುಷ ಅಥ್ಲೆಟಿಕ್ ಕ್ರೀಡಾಕೂಟ ೨೦೨೩-೨೪ರ ರಾಯಚೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ಭಾಗವಹಿಸಿ ಅಂಜಲಿ ಎನ್.ಸಿ.ಗೌಡ ಉತ್ತಮ ಪ್ರದರ್ಶನ ನೀಡಿ ಒಂದು ಚಿನ್ನ ಸೇರಿದಂತೆ ಮೂರು ಬೆಳ್ಳಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಅಂಜಲಿ ಎನ್.ಸಿ.ಗೌಡ ಅವರು ರಾಯಚೂರಿನ ವಿ.ಆರ್.ಇ.ಟಿ ಕಾಲೇಜಿನಲ್ಲಿ ಬಿಪ್ಯಾಡ್ ತರಬೇತಿ ಪಡೆಯುತ್ತಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಾಗೊಂಡಹಳ್ಳಿ ಗ್ರಾಮದ ರೈತಾಪಿ ಕುಟುಂಬದ ಬಡ್ಡೆಗೌಡರ ಚಿಕ್ಕತಿಮ್ಮರಾಯಪ್ಪ, ನಾರಾಯಣಮ್ಮ ರೈತರ ಸುಪುತ್ರಿಯಾಗಿದ್ದು, ೨೦೦ ಮೀ ಓಟದಲ್ಲಿ ಚಿನ್ನದ ಪದಕ, ೧೦೦ ಮೀ ಓಟದಲ್ಲಿ ಬೆಳ್ಳಿ ಪದಕ, ೧೦೦*೧೦೦ ಮೀ ಬೆಳ್ಳಿ ಪದಕ, ೧೦೦*೪೦೦ ಮೀಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಒಡಿಶಾದ ಭುವನೇಶ್ವರ ನಗರದಲ್ಲಿ ನಡೆಯುವ ಆಲ್ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚಿತ್ರ : ರಾಯಚೂರಿನಲ್ಲಿ ನಡೆಯುವ ವಿಶ್ವವಿದ್ಯಾಲಯ ಮಟ್ಟದಲ್ಲಿ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೋಲಾರ ಮೂಲದ ಅಂಜಲಿ ಗೌಡ ರಾಷ್ಟಿçಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
