ನವದೆಹಲಿ, 28 ಫೆಬ್ರವರಿ :
ಆ್ಯಂಕರ್:
ದೇಶೀಯ ಅಂಗಳದ ಟೆಸ್ಟ್ ಪಂದ್ಯಾವಳಿ ರಣಜಿ ಟ್ರೋಫಿ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 32 ತಂಡಗಳೊಂದಿಗೆ ಶುರುವಾದ ಟೂರ್ನಿಯಿಂದ ಈಗಾಗಲೇ 28 ತಂಡಗಳು ಹೊರಬಿದ್ದಿದೆ. ಇದೀಗ ನಾಲ್ಕು ತಂಡಗಳು ಸೆಮಿಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮಾರ್ಚ್ 2 ರಿಂದ ಸೆಮಿಫೈನಲ್ ಪಂದ್ಯಗಳು ಶುರುವಾಗಲಿದೆ.
ಸೆಮಿಫೈನಲ್ನಲ್ಲಿ ಕಣಕ್ಕಿಳಿಯುವ ತಂಡಗಳು:
ವಿದರ್ಭ
ತಮಿಳುನಾಡು
ಮುಂಬೈ
ಮಧ್ಯ ಪ್ರದೇಶ್
ಸೆಮಿಫೈನಲ್ ಹಾದಿ:
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 127 ರನ್ಗಳಿಂದ ಮಣಿಸಿ ವಿದರ್ಭ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಮುಂಬೈ ಮತ್ತು ಬರೋಡಾ ನಡುವಣ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದಾಗ್ಯೂ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಪಡೆದುಕೊಂಡಿದ್ದ ಮುಂಬೈ ತಂಡವು ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 33 ರನ್ಗಳಿಂದ ಮಣಿಸಿ ತಮಿಳುನಾಡು ತಂಡವು ಸೆಮಿಫೈನಲ್ಗೇರಿದೆ.
ಆಂಧ್ರ ಪ್ರದೇಶ ವಿರುದ್ಧದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 4 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಮಧ್ಯ ಪ್ರದೇಶ್ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಸೆಮಿಫೈನಲ್ ಮುಖಾಮುಖಿ:
ಮಾರ್ಚ್ 2 ರಿಂದ 6: ವಿದರ್ಭ vs ಮಧ್ಯ ಪ್ರದೇಶ್ (ಮೊದಲ ಸೆಮಿಫೈನಲ್)
ಮಾರ್ಚ್ 2 ರಿಂದ 6: ತಮಿಳುನಾಡು- ಮುಂಬೈ (ಎರಡನೇ ಸೆಮಿಫೈನಲ್)
ಮಾರ್ಚ್ 10 ರಿಂದ 14: ಫೈನಲ್ ಪಂದ್ಯ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾ ಆ್ಯಪ್ ಮತ್ತು ಸ್ಪೋರ್ಟ್ಸ್ 18 ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು.
ರಣಜಿ ಟ್ರೋಫಿ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ
ವಿದರ್ಭ ತಂಡ: ಶುಭಂ ದುಬೆ , ಫೈಜ್ ಫಜಲ್ , ಕರುಣ್ ನಾಯರ್ , ಧ್ರುವ ಶೋರೆ , ದರ್ಶನ್ ನಲ್ಕಂಡೆ , ಅಕ್ಷಯ್ ವಾಖರೆ , ಉಮೇಶ್ ಯಾದವ್ , ಯಶ್ ಠಾಕೂರ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಹರ್ಷ್ ದುಬೆ , ಲಲಿತ್ ಯಾಶ್ ಯಹದ್ ಕಾಳೆ , ಆದಿತ್ಯ ಠಾಕರೆ , ಸಿದ್ಧೇಶ್ ವಾಥ್ , ರಜನೀಶ್ ಗುರ್ಬಾನಿ , ಜಿತೇಶ್ ಶರ್ಮಾ , ಅಥರ್ವ ತೈಡೆ.
