ಸಿರುಗುಪ್ಪ, 8 ಫೆಬ್ರವರಿ :
ಆ್ಯಂಕರ್ : ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ವಿಭಾಗದ ಫಲಿತಾಂಶ ಪ್ರಕಟವಾಗಿದ್ದು, ಸಿರುಗುಪ್ಪ ಪಟ್ಟಣದ ವಿದ್ಯಾ ಎಲ್. ಬೈಲಪತ್ತಾರ್ ಅವರು ಬಿ.ಎ.ಪದವಿಯಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ.
ಸಿರುಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯಾಗಿದ್ದ, ವಿದ್ಯಾ ಅವರು 3 ವರ್ಷದ ಬಿ.ಎ.ಪದವಿಯಲ್ಲಿ ಎಲ್ಲಾ ಸೆಮಿಸ್ಟರ್ನಲ್ಲಿ ಒಟ್ಟು 4100 ಅಂಕಗಳಿಗೆ 3721 ಅಂಕ ಗಳಿಸಿದ್ದಾರೆ.
ಶೇ.90.76 ಪ್ರತಿಶತ ಸಾಧನೆ ತೋರಿರುವ ವಿದ್ಯಾ ಎಲ್. ಬೈಲಪತ್ತಾರ್ ಅವರಿಗೆ ಕಾಲೇಜಿನ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.
