ಬೆಂಗಳೂರು, 8 ಫೆಬ್ರವರಿ :
ಆ್ಯಂಕರ್ : ವಿಶ್ರಾಂತಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಡಿಯೋ ಕಾಲ್ ಮೂಲಕ ಜನತಾದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ವಿಡಿಯೋ ಕಾಲ್ ಮಾಡಿದ ಡಿ.ಕೆ.ಶಿವಕುಮಾರ್ ಅವರು ಎಷ್ಟು ಜನ ಸೇರಿದ್ದಾರೆ, ಯಾವ ರೀತಿ ಸ್ಪಂದನೆ ದೊರೆಯುತ್ತಿದೆ ಎಂಬೆಲ್ಲಾ ಮಾಹಿತಿ ಪಡೆದುಕೊಂಡರು.
ವಿಡಿಯೋ ಕಾಲ್ ಮೂಲಕವೇ ಜನತಾಸ್ಪಂದನದಲ್ಲಿದ್ದ ಜನರನ್ನು ವೀಕ್ಷಿಸಿದರು. ರಾಕೇಶ್ ಸಿಂಗ್ ಅವರು ತಮ್ಮ ಮೊಬೈಲ್ ಅನ್ನು ಜನರತ್ತ ತಿರುಗಿಸಿ ನೇರ ಚಿತ್ರಣವನ್ನು ಉಪಮುಖ್ಯಮಂತ್ರಿಯವರಿಗೆ ವಿವರಿಸಲಾರಂಭಿಸಿದರು.
ವೇದಿಕೆಯ ವ್ಯವಸ್ಥೆ, ಅರ್ಜಿಗಳ ನೋಂದಾವಣಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ರಾಕೇಶ್ ಸಿಂಗ್ ಸುದೀರ್ಘವಾಗಿ ವಿವರಣೆ ನೀಡಿದರು. ಮುಖ್ಯಮಂತ್ರಿಯವರ ಜನತಾದರ್ಶನಕ್ಕೆ ಇಬ್ಬರು ಸಚಿವರನ್ನು ಹೊರತುಪಡಿಸಿದರೆ ಉಳಿದ ಯಾರೂ ಭಾಗವಹಿಸಿರಲಿಲ್ಲ. ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಇಂದು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆಯುತ್ತಿದ್ದರು. ಅದರ ನಡುವೆ ಜನಸ್ಪಂದನದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
