ಪರ್ಥ್, 9 ಫೆಬ್ರವರಿ :
ಆ್ಯಂಕರ್: ಆಸ್ಟ್ರೇಲಿಯಾದ ಪರ್ಥ್ ನಲ್ಲಿ ಇಂದು ಹಿಂದೂ ಮಹಾಸಾಗರ ಅಧಿವೇಶನ ಆರಂಭವಾಗಲಿದೆ. ಎರಡು ದಿನಗಳ ಈ ಸಮಾವೇಶದ ಉದ್ಘಾಟನಾ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಖಾತೆ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮಾತನಾಡಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರಣೀಲ್ ವಿಕ್ರಂಸಿಂಘೆ, ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ ಮತ್ತು ಸಿಂಗಾಪುರ್ದ ವಿದೇಶಾಂಗ ಸಚಿವ ಡಾ. ವಿವಿಯನ್ ಬಾಲಕೃಷ್ಣನ್ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
