: ಕಂದಾಯ ಅದಾಲತ್ ಕಂದಾಯ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಹೆಚ್ಚು ಸಹಕಾರಿಯಾಗಿದ್ದು, ಪ್ರತಿ ವರ್ಷ ೦೪ ರಾಷ್ಟ್ರೀಯ ಲೋಕ್ ಅದಾಲತ್ ಗಳನ್ನು ಹಮ್ಮಿಕೊಳ್ಳಲಾಗುತ್ತದೆಯೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ. ಮಂಜುನಾಥ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಂದಾಯ ಇಲಾಖೆ, ಉಪ ವಿಭಾಗಾಧಿಕಾರಿಗಳು ಹಾಗೂ ವಕೀಲರ ಸಂಘ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಲೋಕ್ ಆದಾಲತ್ ಅಂಗವಾಗಿ ಕಂದಾಯ ಅದಾಲತ್ನ್ನು ಕೋಲಾರದ ಸಹಾಯಕ ಕಮೀಷನರ್ ರವರ ಕಛೇರಿ ಆವರಣದಲ್ಲಿ ಕಂದಾಯ ಅದಾಲತ್ನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ರಾಷ್ಟ್ರೀಯ ಲೋಕ್ ಅದಾಲತ್ ಸಮಯದಲ್ಲಿ ಕಂದಾಯ ಅದಾಲತ್ನ್ನು ಉಪ ವಿಭಾಗಾಧಿಕಾರಿಗಳು ಹಮ್ಮಿಕೊಂಡು ಬಹಳಷ್ಟು ಕೇಸ್ಗಳನ್ನು ರಾಜಿ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಸಾರ್ವಜನಿಕರು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಳಗಳಿಗೆ ಅಲೆದಾಡುವುದನ್ನು ತಪ್ಪಿಸುವುದಕ್ಕೊಸ್ಕರ ಕಂದಾಯ ಅದಾಲತ್ ಹಮ್ಮಿಕೊಂಡಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು. ಕಂದಾಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಇಂತಹ ಕಂದಾಯ ಅದಾಲತ್ ಹಮ್ಮಿಕೊಳ್ಳಬೇಕು. ಮಾರ್ಚ್ ೧೬ ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಂಡಿದ್ದು ಅದರ ಅಂಗವಾಗಿ ಕಂದಾಯ ಆದಾಲತ್ ಹಮ್ಮಿಕೊಳ್ಳುವಂತೆ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದ ಮೇರೆಗೆ ಸದರಿಯವರು ಕಂದಾಯ ಆದಾಲತ್ ಹಮ್ಮಿಕೊಂಡಿದ್ದು, ಅವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಧನ್ಯವಾದಗಳು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸುನಿಲ ಎಸ್ ಹೊಸಮನಿ ಅವರು ಮಾತನಾಡಿ, ಈ ವರ್ಷದ ಮೊದಲ ರಾಷ್ಟ್ರೀಯ ಲೋಕ್ ಆದಾಲತ್ ಅಂಗವಾಗಿ ಕಂದಾಯ ಅದಾಲತ್ನ್ನು ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಹಾಗೂ ಕಂದಾಯ ಕಛೇರಿಗಳಲ್ಲಿ ಕೇಸುಗಳನ್ನು ಎರಡು ಕಡೆ ಹಾಕಿ ನ್ಯಾಯಾಲಯಕ್ಕೆ ಅಲೆದಾಡುವ ಬದಲು ಸದರಿ ಪ್ರಕರಣಗಳನ್ನು ತಾಜಿ ಮೂಲಕ ಮುಕ್ತಾಯಗೊಳಿಸಿಕೊಳ್ಳಬೇಕು. ಈ ವರ್ಷದಲ್ಲಿ ಮೊದಲ ಕಂದಾಯ ಅದಾಲತ್ ನ್ನು ಹಮ್ಮಿಕೊಂಡಿದ್ದು ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪ್ರತಿ ಕಂದಾಯ ಅದಾಲತ್ನಲ್ಲಿ ಸುಮಾರು ೪೦ ರಿಂದ ೫೦ ಪ್ರಕರಣಗಳು ರಾಜಿ ಮೂಲಕ ಮುಕ್ತಾಯವಾಗುತ್ತಿವೆ. ಈ ರೀತಿ ಆದಾಲತ್ ನಲ್ಲಿ ಕೇಸು ರಾಜಿ ಮಾಡಿಕೊಳ್ಳುವುದರಿಂದ ನೆಮ್ಮದಿಯ ಜೀವನ ನಡೆಸಬಹುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ ಕೋಲಾರ ಜಿಲ್ಲೆಯವರು ಕಂದಾಯ ಇಲಾಖೆಯು ಸೌಲಭ್ಯಗಳನ್ನು ತಲುಪಿಸಲು ಮೊದಲನೆ ಸ್ಥಾನದಲ್ಲಿರುತ್ತದೆ. ಕಂದಾಯ ಇಲಾಖೆಯ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಂದಾಯ ಅದಾಲತ್ನಲ್ಲಿ ಒಂದೇ ದಿವಸ ೪೦ ಪ್ರಕರಣಗಳು ರಾಜಿ ಮೂಲಕ ಮುಕ್ತಾಯಗೊಂಡಿರುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘ ಅಧ್ಯಕ್ಷರಾದ ಮುನೇಗೌಡ ಎಂ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಬೈರಾರೆಡ್ಡಿ ಹಾಗೂ ಸಹಾಯಕ ಕಮೀಷನರ್ ವೆಂಕಟಲಕ್ಷ್ಮಿ ಅವರು ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಅದಾಲತ್ ಕಾರ್ಯಕ್ರಮವನ್ನು ಜಿಲ್ಲಾ ಮತ್ತು ಸೆೆಷನ್ಸ್ ನ್ಯಾಯಾಧೀಶ ಮಂಜುನಾಥ್ ಉದ್ಘಾಟಿಸಿದರು.
