ಕೋಲಾರ, ೯ ನವೆಂಬರ್ (ಹಿ.ಸ) :
ಆ್ಯಂಕರ್ : ಬಾಲಕ ಕಾರ್ತಿಕ್ ಸಿಂಗ್ ಭೀಕರ ಹತ್ಯೆಯನ್ನು ಖಂಡಿಸಿ, ಕಾರ್ತಿಕ್ ಸಾವಿಗೆ ನ್ಯಾಯ ದೊರಕಿಸಿಕೊಡಲು ಜಯನಗರದ ಸಫಲಮ್ಮ ದೇವಾಲಯದ ಮುಂದೆ, ನಾನಾ ಸಂಘಟನೆ ಮುಖಂಡರು ಪೂರ್ವಭಾವಿ ಸಭೆಯನ್ನು ನಡೆಸಿದರು.
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ, ಮುಖಂಡರು ಬಾಲಕ ಕಾರ್ತಿಕ್ ಸಿಂಗ್ ಸಾವಿಗೆ ನ್ಯಾಯ ಒದಗಿಸಲು ಹೋರಾಟದ ರೂಪುರೇಷೆಗಳ ಚರ್ಚೆ ನಡೆಯಿತು. ಪ್ರತಿಯೊಬ್ಬ ಮುಖಂಡರು ಸಹ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಅದರಂತೆ ನಾಳೆ ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಪ್ರವಾಸಿ ಮಂದಿರದಿ0ದ ಮೃತ ಬಾಲಕ ಕಾರ್ತಿಕ್ ಸಾವಿಗೆ ನ್ಯಾಯ ಕೊಡಿಸಲು ಬೃಹತ್ ರ್ಯಾಲಿಯನ್ನು ತಾಲೂಕು ಕಚೇರಿ ವರೆಗೂ ಹಮ್ಮಿಕೊಂಡಿದ್ದು, ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ರ್ಯಾಲಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ, ಸಾರ್ವಜನಿಕರು, ನಾನಾ ಸಂಘಟನೆ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ದೀಪಾವಳಿ ಹಬ್ಬದ ನಂತರ ಕಾರ್ತಿಕ್ ಕೊಲೆಯನ್ನು ಖಂಡಿಸಿ, ನಾನಾ ಸಂಘಟನೆ ಮುಖಂಡರಿ0ದ ಕೋಲಾರ ಬಂದ್ ಮಾಡಲು ಎಲ್ಲರೂ ಸರ್ವಾನುಮತದಿಂದ ತೀರ್ಮಾನ ಕೈಗೊಂಡರು. ಸಮಾಜದಲ್ಲಿ ನಡೆಯುತ್ತಿರುವ ಕೊಲೆಗಳನ್ನು ಖಂಡಿಸಲು, ಸರ್ಕಾರ ವಿಶೇಷ ಅಭಿಯೋಜಕರ ನೇಮಕ ಮಾಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾನಾ ಸಂಘಟನೆ ಮುಖಂಡರು, ನಗರಸಭೆ ಸದಸ್ಯರು, ಮಹಿಳಾ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
ಕೋಲಾರದ ಸಂಸದ ಎಸ್ ಮುನಿಸ್ವಾಮಿ ಮತ್ತು ಶಾಸಕ ಕೊತ್ತೂರು ಜಿ ಮಂಜುನಾಥ್ ಅವರು ನೊಂದ ಕುಟುಂಬಕ್ಕೆ ಸಾಂತ್ವನವನ್ನು ಹೇಳುವ ಪ್ರಜ್ಞೆ ಇಲ್ಲವಾಗಿದೆ. ಇಂಥವರಿಗೆ ಛೀಮಾರಿ ಹಾಕಬೇಕಾಗುತ್ತದೆ, ಕನಿಷ್ಠ ಜ್ಞಾನವು ಇಲ್ಲದ ಜನಪ್ರತಿನಿಧಿಗಳಾಗಿರೋದು ನಮ್ಮ ದುರ್ದೈವವಾಗಿದೆ.ಕಾರ್ತಿಕ್ ಸಿಂಗ್ ಕೊಲೆ ವಿಚಾರದಲ್ಲಿ ಸಂಸದ ಮುನಿಸ್ವಾಮಿ ಆಗಲಿ, ಶಾಸಕ ಕೊತ್ತೂರು ಮಂಜುನಾಥ ಆಗಲಿ ಕ್ರಮದ ಯಾವುದೇ ಹೇಳಿಕೆಯನ್ನು ನೀಡುವ ಮಾತೇ ಇಲ್ಲವಾಗಿದೆ. ಸಾರ್ವಜನಿಕರು ಇವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುವ ಮುಂದೆ ವಾಗಬೇಕಿದೆ. ಸಂಸದ ಮುನಿಸ್ವಾಮಿ ಅವರು ಇಂತಹ ವಿಚಾರಗಳಿಂದ ದೂರ ಉಳಿದುಕೊಳ್ಳುತ್ತಾರೆ, ಬೇರೆ ವಿಚಾರಗಳಿಗೆ ತೋರುವ ಕಾಳಜಿ ಇಲ್ಲಿ ಏಕೆ ಇಲ್ಲ ಎಂದು ಪ್ರಶ್ನಿಸಿದರು. ಕೋಲಾರ ಶಾಸಕರಂತೂ ಮಲೇಶಿಯಾ ಅಥವಾ ಸಿಂಗಾಪುರ್ನಲ್ಲಿ ಬಿಜಿಯಾಗಿ ಇರುತ್ತಾರೆ, ಅವರಿಗೆ ಕೋಲಾರದಲ್ಲಿ ನಡೆಯುವ ಘಟನೆಗಳು ಎಲ್ಲಿ ಗೊತ್ತಾಗುತ್ತದೆ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಚಿತ್ರ : ಕೋಲಾರದಲ್ಲಿ ನಡೆದ ಕಾರ್ತಿಕ್ ಸಿಂಗ್ ಕೊಲೆಗೆ ನ್ಯಾಯ ಒದಗಿಸುವಂತೆ ಹೋರಾಟ ನಡೆಸಲು ನಾನಾ ಸಂಘಟನೆಗಳಿ0ದ ಪೂರ್ವಭಾವಿ ಸಭೆ ನಡೆಯಿತು.
