ನವದೆಹಲಿ,
ವಿಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ಹೆಣ್ಮಕ್ಕಳು ಐತಿಹಾಸಿ ದಾಖಲೆ ಮಾಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬಗ್ಗು ಬಡಿದು ಅಂತಿಮ ಪ್ರವೇಶ ಪಡೆದಿದ್ದಾರೆ . ಇದು ಆರ್ ಸಿಬಿ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ನಿನ್ನೆ ಮುಂಬೈ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ, ದೆಹಲಿ ಮೆಟ್ರೋದಲ್ಲಿ ಆರ್ಸಿಬಿ ಪರ ಘೋಷಣೆ ಜೊರಾಗಿಯೇ ಇತ್ತು. ಮೆಟ್ರೋ ಪ್ರಯಾಣ ಮಾಡ್ತಿದ್ದ ನೂರಾರು ಯುವಕರು ಆರ್ಸಿಬಿ, ಆರ್ಸಿಬಿ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ.
ಅಲ್ಲದೇ, ಆರ್ ಸಿಬಿಯನ್ನು ಅಂತಿಮ ಪ್ರವೇಶಕ್ಕೆ ಕಾರಣರಾದ ಪೆರ್ರಿ ಹೆಸರನ್ನೂ ಕೂಗಿದ್ದಾರೆ. ಸದ್ಯ ಆರ್ ಸಿಬಿ ಪರ ಘೋಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂತಿಮ ಪಂದ್ಯವು ನಾಳೆ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆರ್ಸಿಬಿಗೆ ಸವಾಲ್ ಆಗಲಿದೆ.
