ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲು ಬೆಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಕುರಿತು ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಅವರು ಇರಬಹುದು ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡವು ಹುಡುಕಾಟ ಮುಂದುವರಿಸಿದೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ದೆಹಲಿಯ ನಿವಾಸ ಹಾಗೂ ಕರ್ನಾಟಕ ಭವನದಲ್ಲಿ ಶೋಧ ನಡೆದರೂ, ಮಾಜಿ ಮುಖ್ಯಮಂತ್ರಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ, ದೆಹಲಿಯ ಸುತ್ತಮುತ್ತ ಪ್ರದೇಶದಲ್ಲಿ ಯಡಿಯೂರಪ್ಪ ಇದ್ದಾರೆ ಎಂಬ ಮಾಹಿತಿ ಮೇರೆಗೆ ಸಿಐಡಿ ಕಾರ್ಯಾಚರಣೆ ಮುಂದುವರೆದಿದೆ.
BulletsIn
- ಬಿ.ಎಸ್.ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ.
- ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಆದೇಶ.
- ಪೋಕ್ಸೋ ವಿಶೇಷ ನ್ಯಾಯಾಲಯದಿಂದ ವಾರಂಟ್.
- ಸಿಐಡಿ ಯಡಿಯೂರಪ್ಪನವರ ಪತ್ತೆಗೆ ಶೋಧ ಆರಂಭಿಸಿದೆ.
- ದೆಹಲಿಯಲ್ಲಿ ಇರಬಹುದು ಎಂಬ ಮಾಹಿತಿ.
- ದೆಹಲಿಯ ಬಿ.ವೈ.ರಾಘವೇಂದ್ರ ನಿವಾಸದಲ್ಲಿ ಶೋಧ.
- ಕರ್ನಾಟಕ ಭವನದಲ್ಲಿ ಸಿಐಡಿ ಶೋಧ.
- ಮಾಜಿ ಮುಖ್ಯಮಂತ್ರಿಗಳು ಪತ್ತೆಯಾಗಿಲ್ಲ.
- ದೆಹಲಿಯ ಸುತ್ತಮುತ್ತ ಪ್ರದೇಶದಲ್ಲಿ ಶೋಧ ಮುಂದುವರಿಸಿದೆ.
- ಸಿಐಡಿ ಕಾರ್ಯಾಚರಣೆ ನಡೆಯುತ್ತಿದೆ.
