ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿರುವ ಫೆಡರಲ್ ರಿಸರ್ವ್ ನಿರೀಕ್ಷೆಯಂತೆ ಈ ಬಾರಿ ಬಡ್ಡಿದರ ಕಡಿತಗೊಳಿಸಿಲ್ಲ. ಅಷ್ಟೇ ಅಲ್ಲ, ಈ ವರ್ಷಾಂತ್ಯದವರೆಗೂ ಬಡ್ಡಿ ಕಡಿತ ಕ್ರಮವನ್ನು ತಳ್ಳಿ ಹಾಕಿದೆ. ಡಿಸೆಂಬರ್ನಲ್ಲಿ ಅಲ್ಪಮಟ್ಟದಲ್ಲಿ ಬಡ್ಡಿ ಇಳಿಸುವ ಇರಾದೆ ಇದೆ ಎನ್ನುವ ಸುಳಿವನ್ನು ಫೆಡರಲ್ ರಿಸರ್ವ್ ಅಧಿಕಾರಿಗಳು ಬಿಟ್ಟುಕೊಟ್ಟಿದ್ದಾರೆ. ಸದ್ಯ ಅಲ್ಲಿ ಬಡ್ಡಿದರ ಶೇ. 5.25ರಿಂದ ಶೇ. 5.50ರವರೆಗೆ ಇದೆ. ಈ ನಿರ್ಧಾರ ಬರುವ ಮುನ್ನ ಅಮೆರಿಕದ ಹಣದುಬ್ಬರದ ವರದಿಯೂ ಹೊರಬಂದಿತ್ತು, ಅದು ಮೇ ತಿಂಗಳಲ್ಲಿ ಶೇ. 3.3ರಷ್ಟಿದೆ. ಹಿಂದಿನ ಸಭೆಯಲ್ಲಿ ಈ ವರ್ಷ ಮೂರು ಬಾರಿ ಬಡ್ಡಿದರ ಇಳಿಸಲು ಮುಂದಾಗಿದ್ದ ಫೆಡರಲ್ ರಿಸರ್ವ್ ಈಗ ಡಿಸೆಂಬರ್ನಲ್ಲಿ ಮಾತ್ರವೇ ರೇಟ್ ಕಟ್ ಕ್ರಮಕ್ಕೆ ಕೈಹಾಕಲು ನಿರ್ಧರಿಸಿದೆ.
BulletsIn
- ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸಿಲ್ಲ.
- ಬಡ್ಡಿ ಕಡಿತ ಕ್ರಮ ವರ್ಷಾಂತ್ಯದವರೆಗೂ ತಳ್ಳಿ ಹಾಕಿದೆ.
- ಡಿಸೆಂಬರ್ನಲ್ಲಿ ಬಡ್ಡಿ ಇಳಿಸುವ ಸುಳಿವು ನೀಡಿದೆ.
- ಬಡ್ಡಿದರ ಶೇ. 5.25-5.50 ಮಟ್ಟದಲ್ಲಿ ಸ್ಥಿರವಾಗಿದೆ.
- ಅಮೆರಿಕದ ಹಣದುಬ್ಬರ ಮೇ ತಿಂಗಳಲ್ಲಿ ಶೇ. 3.3ರಷ್ಟಿದೆ.
- ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ದರ ಶೇ. 3.2 ಇತ್ತು.
- ಶೇ. 2 ಹಣದುಬ್ಬರ ಗುರಿ ಇನ್ನೂ ದೂರ.
- ಈ ವರ್ಷ ಮೂರು ಬಾರಿಗೆ ಬಡ್ಡಿ ಇಳಿಸುವ ಯೋಚನೆ ಹಿನ್ನಡೆ.
- ಡಿಸೆಂಬರ್ನಲ್ಲಿ ಬಡ್ಡಿ ಕಡಿತ ಸಾಧ್ಯತೆ.
- ಡಿಸೆಂಬರ್ನಲ್ಲಿ 25 ಬೇಸಿಸ್ ಪಾಯಿಂಟ್ ದರ ಕಡಿತ ಸಾಧ್ಯ.
