ರಾಯಚೂರು, 18 ಜನವರಿ(ಹಿ.ಸ):
ಆ್ಯಂಕರ್ : ಬೆಲ್ಲಂ ನರಸರೆಡ್ಡಿ ಅಧ್ಯಕ್ಷರು ದಿ.ಗಂಜ್ ಮಚರ್ಂಟ್ಸ್ ಅಸೋಸಿಯೇಶನ್, ಕಾಟನ್ ಗ್ರೇನ್ & ಸೀಡ್ಸ್ ರಾಜೇಂದ್ರ ಗಂಜ್, ಇವರು ಲಾರಿ ಓನರ್ ವೇಲ್ಫೇರ್ ಅಸೋಸಿಯೇಶನ್ ರಾಯಚೂರು ಇವರು ಜ.17ರಿಂದ ಅನಿರ್ದಿμÁ್ಟವಧಿಯವರೆಗೆ ಮುಷ್ಕರ ಹಮ್ಮಿಕೊಂಡಿರುವ ಕಾರಣ ಲಾರಿ ಮಾಲೀಕರ ಮುಷ್ಕರವು ಕೊನೆಗೊಳ್ಳುವವರೆಗೆ ಜ.18ರಿಂದ ಎಲ್ಲಾ ಕೃಷಿ ಉತ್ಪನ್ನಗಳ ಖರೀದಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲವೆಂದು ಮನವಿ ಪತ್ರದ ಮೂಲಕ ಸಮಿತಿಗೆ ವಿನಂತಿಸಿಕೊಂಡಿರುತ್ತಾರೆ. ಆದ್ದರಿಂದ ಎಲ್ಲಾ ರೈತ ಭಾಂದವರು ಲಾರಿ ಮಾಲೀಕರ ಮುಷ್ಕರವು ಕೊನೆಗೊಳ್ಳುವವರೆಗೆ ತಮ್ಮ ಕೃಷಿ ಹುಟ್ಟುವಳಿಗಳನ್ನು ಮಾರಾಟಕ್ಕಾಗಿ ಈ ಸಮಿತಿಯ ಪ್ರಾಂಗಣಕ್ಕೆ ತರಬರಾದೆಂದು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ
