


ಬಳ್ಳಾರಿ, 18 ಜನವರಿ(ಹಿ.ಸ):
ಆ್ಯಂಕರ್ : ಕಿಷ್ಕಿಂದ ವಿಶ್ವವಿದ್ಯಾಲಯದವು ಫೆಬ್ರವರಿ 2024 ರಿಂದ ಎಂಬಿಎ ಮತ್ತು ಎಂಸಿಎ ಕೋರ್ಸ್ಗಳನ್ನು ಪ್ರಾರಂಭಿಸುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎನ್. ನಾಗಭೂಷಣ ಅವರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಕಚೇರಿಯಲ್ಲಿ ಸುದ್ದಿಗಾರರಿಗೆ ಶುಕ್ರವಾರ ಈ ಮಾಹಿತಿ ನೀಡಿದ ಅವರು, ಪ್ರಸ್ತುತ ಬಿ.ಐ.ಟಿ.ಎಂ ಮತ್ತು ಬಿ.ಬಿ.ಸಿ ಕ್ಯಾಂಪಸ್ನಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ನಡೆಯುತ್ತಿದ್ದು, ಸಿಂಧಿಗೇರಿ ಬಳಿ 50 ಎಕರೆ ಭೂ ಪ್ರದೇಶದಲ್ಲಿ ಮುಖ್ಯ ಕ್ಯಾಂಪಸ್ ನಿರ್ಮಾಣ ಕಾಮಗಾರಿ ನಡೆದಿದೆ. ಸ್ವಂತದ ಕ್ಯಾಂಪಸ್ ಮಾರ್ಚ್ 2025ರ ವೇಳೆಗೆ ಸಿದ್ಧವಾಗಲಿದ್ದು, ಜುಲೈ 2025 ರಿಂದ ಹೊಸ ಕ್ಯಾಂಪಸ್ನಲ್ಲಿ ಶೈಕಣಿಕ ಚಟುವಟಿಕೆಗಳು ನಡೆಯಲಿವೆ ಎಂದರು.
ಕಿಷ್ಕಿಂದ ವಿಶ್ವವಿದ್ಯಾಲಯವು ಯು.ಜಿ.ಸಿ.ಯ ನಿಯಮಗಳ ಪ್ರಕಾರ ವಿದ್ಯಾರ್ಥಿ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಬದ್ಧವಾಗಿದ್ದು, ಯುಜಿಸಿ ಕಾಯ್ದೆ 1957ರ ಸೆಕ್ಷನ್ 2ಎಫ್ ಪ್ರಕಾರ ಅನುಮೋದನೆಗೊಂಡು ವಿಶ್ವವಿದ್ಯಾಲಯಗಳ ಎಐಎಸ್ಎಚ್ಇ ಪೋರ್ಟಲ್ನಲ್ಲಿ ಸೇರ್ಪಡೆಯಾಗಿದೆ. ಕಿಷ್ಕಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಕಾಲರ್ಶಿಫ್ಗಳನ್ನು ಪಡೆಯಲು ಮತ್ತು ಶೈಕ್ಷಣಿಕ ಸಾಲ ಪಡೆಯುವ ಎಲ್ಲಾ ನೀತಿ-ನಿಯಮಗಳಿಗೆ ಒಳಪಡುತ್ತಿದ್ದಾರೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್.ಎ. ಪಾಟೀಲ್, ರಿಜಿಸ್ಟ್ರಾರ್ ಡಾ. ಎಸ್.ಬಿ. ಕಾಮಶೆಟ್ಟಿ, ಡಾ. ಈರಣ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
