ಹುಬ್ಬಳ್ಳಿ ಜನವರಿ ೨(ಹಿ.ಸ)
ಆ್ಯಂಕರ್: ರಾಮ ಜನ್ಮಭೂಮಿ ಹೋರಾಟಗಾರ ಅರೆಸ್ಟ್ ವಿಚಾರದಲ್ಲಿ ಪೋಲಿಸರು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಯಾವುದಾದರೂ ಒಂದು ವಿಷಯ ಬೇಕು. ರೋಟಿನ್ ವರ್ಕ್ಗೆ ಬಣ್ಣ ಹಚ್ಚಿ ಬೇರೆ ತರಹದ ಮೇಸಜ್ ಪಾಸ್ ಮಾಡಿ ಜನರ ಕೋಮು ಸೌಹಾರ್ದತೆ ಹಾಳು ಮಾಡುವ ಕೆಲಸವನ್ನು ಬಿಜೆಪಿ ಮೊದಲಿನಿಂದಲೂ ಮಾಡುತ್ತಿದೆ ಎಂದು ರಾಮ ಮಂದಿರ ಕೇಸ್ ರೀ ಒಪನ್ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ, ಆರ್. ಅಶೋಕ್ ಅವರು ವಿಪಕ್ಷ ನಾಯಕನಾಗಿ ಅಭಿವೃದ್ಧಿ ವಿಚಾರವಾಗಿ ಪ್ರತಿಭಟನೆ ಮಾಡಲಿ. ಅದು ಬಿಟ್ಟು ಯಾವುದೋ ವಿಚಾರ ಇಟ್ಟಕೊಂಡು ಎಲೆಕ್ಷನ್ ಗಿಮಿಕ್ ಮಾಡೋದು ಸರಿಯಲ್ಲ. ಇದು ಯಾವುದೋ ಒಂದು ಪ್ರಕರಣ. ಇದಕ್ಕೆ ಅದನ್ನು ದೊಡ್ಡದು ಮಾಡಿ ಗಲಾಟೆ ಮಾಡೋದು ಎಷ್ಟರಮಟ್ಟಿಗೆ ಸರಿ? ಬಿಜೆಪಿಗೆ ಬೇರೆ
ವಿಷಯ ಇಲ್ಲ. ಯಾವುವೂ ವಿಚಾರ ಮಾಡಲ್ಲ. ಜನ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಅಳಿಸಿ ಹಾಕಲು ಕೋಮು ಭಾವನೆಗೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡಿಕೊಂಡು ಬಂದಿದೆ.ಸುಮ್ಮನೆ ರಾಮ ಮಂದಿರ ತೆಗೆದುಕೊಂಡು ಗಲಭೆ ಬೇಡ, ಈಗ ರಾಮ ಜನ್ಮಭೂಮಿ ಕೇಸ್ ಅಂತ ಮಾತನಾಡುತ್ತಾರೆ ಆದರೆ ಪೊಲೀಸರು ಇದನ್ನೇನು ನೋಡಿಕೊಂಡು ಮಾಡಿದ್ದಾರಾ?
ಪೋಲೀಸರು ಜನರಲ್ ಆಗಿ ಪೆಂಡಿಂಗ್ ಕ್ಲಿಯರ್ ಮಾಡಿದ್ದಾರೆ. ಬಿಜೆಪಿಗರು ತಮಗೆ ಹೇಗೆ ಬೇಕೊ ಹಾಗೇ ತಿರುಚುತ್ತಾರೆ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಹುಬ್ಬಳ್ಳಿ ಈದ್ದಾ ವಿಷಯದಿಂದ ಬಿಜೆಪಿ ದೇಶದಲ್ಲಿ ನೆಲೆಯೂರಿತ್ತು. ಈಗ ಇಂತಹದ್ದೆ ವಿಷಯ ಹುಡುಕುತ್ತಾರೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ಗೊಂದಲ ಸೃಷ್ಟಿ ಮಾಡೋದು, ಜನರ ಭಾವನೆಗೆ ಧಕ್ಕೆ ತರೋದೆ ಬಿಜೆಪಿ ಅಜೆಂಡಾ ಎಂದರು. ಹಳೇ ಹುಬ್ಬಳ್ಳಿ ಗಲಭೆಯಲ್ಲಿ 90% ಅಮಾಯಕರನ್ನು ವರ್ಷಾನುಗಟ್ಟಲೆ ಜೈಲಿಗೆ ಹಾಕಿ ಹಾಳು ಮಾಡಿದ್ದು ರಾಜಕಾರಣ ಅಲ್ವಾ?
ಹುಬ್ಬಳ್ಳಿ ಈದ್ದಾ ವಿಷಯದಿಂದ ಬಿಜೆಪಿ ದೇಶದಲ್ಲಿ ನೆಲೆಯೂರಿತ್ತು. ಈಗ ಇಂತಹದ್ದೆ ವಿಷಯ ಹುಡುಕುತ್ತಾರೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ಗೊಂದಲ ಸೃಷ್ಟಿ ಮಾಡೋದು, ಜನರ ಭಾವನೆಗೆ ಧಕ್ಕೆ ತರೋದೆ ಬಿಜೆಪಿ ಅಜೆಂಡಾ ಎಂದರು. ಹಳೇ ಹುಬ್ಬಳ್ಳಿ ಗಲಭೆಯಲ್ಲಿ 90% ಅಮಾಯಕರನ್ನು ವರ್ಷಾನುಗಟ್ಟಲೆ ಜೈಲಿಗೆ ಹಾಕಿ ಹಾಳು ಮಾಡಿದ್ದು ರಾಜಕಾರಣ ಅಲ್ವಾ? ಇದು ಕೋರ್ಟ್ ನಿರ್ದೇಶನ ಪ್ರಕರಣದ ತನಿಖೆ ನಡೆದಿದೆ. ಆರೋಪಿಗಳು ಇಳಿ ವಯಸ್ಸಿನಲ್ಲಿ ಇದ್ದಾರೆ. ಅಂದ್ರೆ ಅಮಾಯಕರು ಇಷ್ಟು ವರ್ಷ ಸತ್ತಿಲ್ವಾ? ಎಂದು ಪ್ರಸಾದ್ ಅಬ್ಬಯ್ಯ ಪ್ರಶ್ನೆ ಮಾಡಿದ್ದಾರೆ.
ಹಿಂದುಸ್ತಾನ್ ಸಮಾಚಾರ.
