ವಿಜಯಪುರ, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2025-26ನೇ ಸಾಲಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ರೂ.5000 ಆರ್ಥಿಕ ನೆರವು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಸಾಲಿನಲ್ಲಿ ನೇಕಾರ ಸಮ್ಮಾನ ಯೋಜನೆಯಡಿ ಹೊರಗುಳಿದ ಕೈಮಗ್ಗ-ವಿದ್ಯುತ್ ಮಗ್ಗ ನೇಕಾರರು ಮಾತ್ರ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಯೋಜನೆಯಡಿ ಕೈಮಗ್ಗ-ವಿದ್ಯುತ್ ಮಗ್ಗ ವೈಯಕ್ತಿಕ ನೇಕಾರರು,ಕೆ.ಎಚ್.ಡಿಸಿ ನೇಕಾರರು, ಕೈಮಗ್ಗ-ವಿದ್ಯುತ್ ಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಪ್ರಸ್ತುತ ನೇಕಾರಿಕೆ ಮಾಡುತ್ತಿರುವ ನೇಕಾರರು ದಿನಾಂಕ:18-09-2025ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹರು,ಕೈಮಗ್ಗ ಮತ್ತು ಜವಳಿ ವ ಜಿಲ್ಲಾ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು, ಆಧಾರ ಕಾರ್ಡ್,ನೇಕಾರ ಸಮ್ಮಾನ ಐಡಿ,ಪೆಹಚಾನ ಕಾರ್ಡ್,ಆಧಾರ ಲಿಂಕ್ ಮಾಡಿದ ಬ್ಯಾಂಕ್ ಪಾಸ್ ಬುಕ್ ಪ್ರತಿ,ಕೈಮಗ್ಗ-ವಿದ್ಯುತ್ ಮಗ್ಗದಲ್ಲಿ ನೇಕಾರಿಕೆಯಲ್ಲಿ ತೊಡಗಿರುವ ಫೋಟೋ ಮತ್ತು ಪಾವತಿ ರಸೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ,ಸಲ್ಲಿಸುವಂತೆಯೂ, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು,ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ, ಶಿಖಾರಖಾಎನೆ,ಸ್ಟೇಶನ್‌ಬ್ಯಾಕ್ ರೋಡ್,ಡಿಐಸಿ ಆವರಣ,ವಿಜಯಪುರ ಇವರನ್ನು ಹಾಗೂ ಮೊಬೈಲ್ ಸಂಖ್ಯೆ 9902561441,9538114434 ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande
