ನವದೆಹಲಿ,10ನವೆಂಬರ್ (ಹಿ.ಸ):
ಆ್ಯಂಕರ್ :ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ೨ ಲಕ್ಷ ೮೫ ಸಾವಿರ ಟನ್ ಗೋಧಿ ಹಾಗೂ ೫ ಸಾವಿರ ಮೆಟ್ರಿಕ್ ಟನ್ಗೂ ಹೆಚ್ಚು ಅಕ್ಕಿಯನ್ನು ಹರಾಜುದಾರರಿಗೆ ಮಾರಾಟ ಮಾಡಲಾಗಿದೆ. ಅಕ್ಕಿ, ಗೋಧಿ ಮತ್ತು ಆಟದ ಚಿಲ್ಲರೆ ಮಾರಾಟದ ಮೇಲೆ ನಿಯಂತ್ರಣಕ್ಕಾಗಿ ಮಾರುಕಟ್ಟೆ ಮಧ್ಯಪ್ರವೇಶದ ಸರ್ಕಾರದ ಕ್ರಮವಾಗಿ ಸಾಪ್ತಾಹಿಕ ಇ-ಹರಾಜುಗಳನ್ನು ಆಯೋಜಿಸಲಾಗಿದೆ. ಅರೆ ಸರ್ಕಾರಿ ಮತ್ತು ಕೇಂದ್ರೀಯ ಭಂಡಾರ, ನಫೆಡ್ ನಂತಹ ಸಹಕಾರಿ ಸಂಸ್ಥೆಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಹೆಚ್ಚುವರಿಯಾಗಿ ೨ ಲಕ್ಷ ೫೦ ಸಾವಿರ ಟನ್ ಗೋಧಿಯನ್ನು ಹಂಚಿಕೆ ಮಾಡಲಾಗಿದೆ. ಈ ಸಂಸ್ಥೆಗಳು ಗೋಧಿಯನ್ನು ಹಿಟ್ಟಾಗಿ ಮಾಡಿ, ಭಾರತ್ ಆಟ ಬ್ರ್ಯಾಂಡ್ನೊಂದಿಗೆ ಕೆ.ಜಿ.ಗೆ ೨೭ ರೂಪಾಯಿ ೫೦ ಪೈಸೆ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಯಡಿ ಗೋಧಿ ಮಾರಾಟದ ವ್ಯಾಪ್ತಿಯಿಂದ ಮಾರಾಟಗಾರರನ್ನು ಹೊರಗಿಡಲಾಗಿದೆ. ಕಳ್ಳ ದಾಸ್ತಾನು ತಡೆಯಲು ದೇಶಾದ್ಯಂತ ಒಂದು ಸಾವಿರದ ೮೦೦ಕ್ಕೂ ಹೆಚ್ಚು ಹಠಾತ್ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
