ಬೆಂಗಳೂರು, 22 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ರಾಮಭಕ್ತರು ಕಾಯುತ್ತಿದ್ದಾರೆ. ಇಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೊಳ್ಳಲಿದ್ದು, ಕರ್ನಾಟಕದಲ್ಲಿ ರಾಮೋತ್ಸವ ಸಂಭ್ರಮ ಕಳೆಗಟ್ಟಿದೆ. ಶತಮಾನಗಳಿಂದ ಕಾತುರದಿಂದ ಕಾಯ್ತಿದ್ದ ರಾಮನ ಭಕ್ತರಿಗೆ ಇಂದು ಮರೆಯಲಾರದ ದಿನವಾಗಿದೆ. ಜಾನಕಿವಲ್ಲಭನ ಸ್ಮರಣೆಯಲ್ಲಿ ಭಕ್ತರ ಮನ ತುಂಬಿದೆ. ಆಯೋಧ್ಯೆಯಲ್ಲಿ ರಾಮೋತ್ಸವದ ಗತವೈಭವ ಮೇಳೈಸಿದೆ.
ಅಯೋಧ್ಯೆ ರಾಮಲಲ್ಲಾನ ಪ್ರತಿಷ್ಠಾಪನೆಗೆ ಕೌಂಟ್ಡೌನ್ ಶುರುವಾಗಿದೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವ ಗಣ್ಯರಿಗೆ ಕರ್ನಾಟಕದಿಂದ ವಿಶೇಷ ಉಡುಗೂರೆ ತಲುಪುತ್ತಿರೊದು ಹೆಮ್ಮೆಯ ಸಂಗತಿಯಾಗಿದೆ. ಖ್ಯಾತ ಚಾಕೃತಿ ಕಲಾವಿದ ಸಚಿನ್ ಸಂಘೆ ಕೈಯಲ್ಲರಳಿದ ರಾಮಲಲ್ಲಾ ಮೂರ್ತಿಗಳು ಅಯೋಧ್ಯೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ಕಲಾವಿದ ಸಚಿನ್ ಸಂಘೆ ಸಂತಸ ಹಂಚಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
