
ದೆಹಲಿ, 22 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಮೂರ್ತಿ “ಪ್ರಾಣ ಪ್ರತಿಷ್ಠೆ” ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜ.21) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಇಂದು (ಜ.22) ರಂದು ನಡೆಯುವ ಶ್ರೀರಾಮಲಲ್ಲಾ “ಪ್ರಾಣ ಪ್ರತಿಷ್ಠೆ” ಸಮಾರಂಭದಲ್ಲಿ ಭಾಗಿಯಾಗಲು ನೀವು ಕಠಿಣ ಅನುಷ್ಠಾನವನ್ನು ಕೈಗೊಂಡಿದ್ದೀರಿ.
ನೀವು ಕೈಗೊಂಡ 11-ದಿನಗಳ ಅನುಷ್ಠಾನ ಕೇವಲ ಪವಿತ್ರ ಧಾರ್ಮಿಕ ಆಚರಣೆಗಳ ಅನುಸರಣೆ ಮಾತ್ರವಲ್ಲ, ಇದು ತ್ಯಾಗ ಮನೋಭಾವದಿಂದ ಪ್ರೇರಿತವಾದ ಅತ್ಯುನ್ನತ ಆಧ್ಯಾತ್ಮಿಕ ಕಾರ್ಯವಾಗಿದೆ. ಇಂತಹ ಶುಭ ಸಂದರ್ಭದಲ್ಲಿ, ನೀವು ಅಯೋಧ್ಯೆಗೆ ಭೇಟಿ ನೀಡುತ್ತಿರುವುದಕ್ಕೆ ನಾನು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್
